ಸಾವಿರ ರೂಪಾಯಿ ಸಾಲ ವಾಪಸ್ ಕೊಡದೇ ಇದ್ದುದಕ್ಕೆ ವ್ಯಕ್ತಿಯೋರ್ವನ ಬೆರಳನ್ನೇ ಕತ್ತರಿಸಿದ ಅಮಾನುಷ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು (ಡಿ.11): ಸಾವಿರ ರೂಪಾಯಿ ಸಾಲ ವಾಪಸ್ ಕೊಡದೇ ಇದ್ದುದಕ್ಕೆ ವ್ಯಕ್ತಿಯೋರ್ವನ ಬೆರಳನ್ನೇ ಕತ್ತರಿಸಿದ ಅಮಾನುಷ ಘಟನೆ ತುಮಕೂರಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯಲ್ಲಿ ತುಮಕೂರು ತಾಲೂಕಿನ ನಿಡುಹೊಳಲು ಗ್ರಾಮದ ನಿವಾಸಿ ಶಿವಣ್ಣ ಎನ್ನುವವರು ಬೆರಳನ್ನು ಕಳೆದುಕೊಂಡಿದ್ದಾರೆ. ಶಿವಣ್ಣ ಇದೇ ನಿಡುಹೊಳಲು ಗ್ರಾಮದ ಕುಮಾರ್ ಎನ್ನುವವರಿಂದ ಕಳೆದ 15 ದಿನಗಳ ಹಿಂದೆ ಒಂದು ಸಾವಿರ ರೂ ಸಾಲ ಪಡೆದಿದ್ದ ಎನ್ನ ಲಾಗಿದೆ. ಸಾಲ ಹಿಂದಿರುಗಿಸುಂತೆ ನಿನ್ನೆ ಕುಮಾರ್ ಶಿವಣ್ಣಗೆ ತಾಕೀತು ಮಾಡಿದ್ದಾನೆ. ದುಡ್ಡು ಹೊಂದಿಸಲು ಆಗದೇ ಇದ್ದುದರಿಂದ ಇಂದು ಸೋಮವಾರ ಮರಳಿಸುವುದಾಗಿ ಹೇಳಿದ್ದಾನೆ. ಇದಕ್ಕೆ ಒಪ್ಪದ ಕುಮಾರ ಹಾಗೂ ಆತನ ಪತ್ನಿ ವೀಣಾ ಶಿವಣ್ಣ ರ ಜೊತೆ ಜಗಳ ಮಾಡಿದ್ದಾರೆ. ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಶಿವಣ್ಣನ ಬಲಗೈಯ ಮಧ್ಯದ ಬೆರಳು ತುಂಡಾಗಿ ಬಿದ್ದಿದೆ. ಅಲ್ಲದೆ ಎದೆ ಭಾಗಕ್ಕೂ ಏಟಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದೆ.ಈ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ