Asianet Suvarna News Asianet Suvarna News

ಬಿಲ್ ಕೊಡದ ಫ್ಲಿಪ್ ಕಾರ್ಟ್'ಗೆ ದಂಡ

ಮೊಬೈಲ್ ಗ್ರಾಹಕರಿಗೆ ಸರಿಯಾದ ರಸೀದಿ ನೀಡದ ಪರಿಣಾಮ ಮಾನಸಿಕ ಹಿಂಸೆ ಹಾಗೂ ಆರ್ಥಿಕವಾಗಿ ತೊಂದರೆ ಅನುಭವಿಸಿದ ಗ್ರಾಹಕನಿಗೆ ಮೊಬೈಲ್ ಫೋನ್‌ನ ಪೂರ್ಣ ಮೊತ್ತ ಹಿಂದಿರುಗಿಸುವ ಜೊತೆಗೆ ಕಾನೂನು ಹೋರಾಟ ವೆಚ್ಚವಾಗಿ ೪ ಸಾವಿರ ರುಪಾಯಿ ನೀಡುವಂತೆ ಆನ್‌ಲೈನ್ ಮಾರುಕಟ್ಟೆ ದೈತ್ಯ ಫ್ಲಿಪ್ ಕಾರ್ಟ್ ಕಂಪನಿ ಗ್ರಾಹಕರ ಹಕ್ಕುಗಳ ನ್ಯಾಯಾಲಯ ಆದೇಶಿಸಿದೆ.

Fine Impose To FlipKart

ಬೆಂಗಳೂರು (ಡಿ.23) : ಮೊಬೈಲ್ ಗ್ರಾಹಕರಿಗೆ ಸರಿಯಾದ ರಸೀದಿ ನೀಡದ ಪರಿಣಾಮ ಮಾನಸಿಕ ಹಿಂಸೆ ಹಾಗೂ ಆರ್ಥಿಕವಾಗಿ ತೊಂದರೆ ಅನುಭವಿಸಿದ ಗ್ರಾಹಕನಿಗೆ ಮೊಬೈಲ್ ಫೋನ್‌ನ ಪೂರ್ಣ ಮೊತ್ತ ಹಿಂದಿರುಗಿಸುವ ಜೊತೆಗೆ ಕಾನೂನು ಹೋರಾಟ ವೆಚ್ಚವಾಗಿ ೪ ಸಾವಿರ ರುಪಾಯಿ ನೀಡುವಂತೆ ಆನ್‌ಲೈನ್ ಮಾರುಕಟ್ಟೆ ದೈತ್ಯ ಫ್ಲಿಪ್ ಕಾರ್ಟ್ ಕಂಪನಿ ಗ್ರಾಹಕರ ಹಕ್ಕುಗಳ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಫ್ಲಿಪ್‌ಕಾರ್ಟ್ ಪನಿ ಗ್ರಾಹಕರಿಗೆ ವಿತರಿಸಿರುವ ಉತ್ಪನ್ನಕ್ಕೆ ಹೊಂದಾಣಿಕೆ ಯಾಗುವಂತಹ ರಸೀದಿ ನೀಡುವಲ್ಲಿ ಎಡವಿದೆ. ಬದಲಾಗಿ ಗ್ರಾಹಕರಿಂದ ದೂರು ಬಂದಿದ್ದರೂ ಸೂಕ್ತ ಪ್ರತಿಕ್ರಿಯೆ ನೀಡಿದೆ ನಿರ್ಲಕ್ಷ್ಯತನ ಪ್ರದರ್ಶಿಸಿದೆ. ಆನ್‌ಲೈನ್‌ನಲ್ಲಿ ವಿವಿಧ ರೀತಿಯ ಉತ್ಪನ್ನಗಳ ಖರೀದಿಗೆ ವೇದಿಕೆಯಾಗಿರುವ ಕಂಪನಿ ಗ್ರಾಹಕರು ಮತ್ತು ಕಂಪನಿಗಳ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಹೊಣೆಗಾರಿಕೆಯನ್ನು ಮರೆತಿದೆ. ಹಣ ಹಿಂದಿರುಗಿಸುವ ಸಲುವಾಗಿ ಗ್ರಾಹಕರಿಗೆ ನೆರವಾಗುವಂತೆ ಕಾರ್ಯನಿರ್ವಹಿಸಲು ಸಂಸ್ಥೆಗೆ ಅವಕಾಶ

ವಿದ್ದರೂ, ಆ ಕಾರ್ಯ ನಿರ್ವಹಿಸಿದೇ ತನ್ನ ಜವಾಬ್ದಾರಿ ಯಿಂದ ನುಣುಚಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆ ಯಲ್ಲಿ ಹಣ ಹಿಂದಿರುಗಿಸುವುದು ಸೂಕ್ತ ಎಂದು ಗ್ರಾಹಕರ ಹಕ್ಕುಗಳ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ವಿ. ಸಿಂಗ್ರಿ, ಸದಸ್ಯರಾದ ಎಂ. ಯಶೋಧಮ್ಮ ಮತ್ತ ಪಿ.ಕೆ. ಶಾಂತಾ ಅವರಿದ್ದ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟು ದಂಡ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶ್ರೀನಗರದ ನಿವಾಸಿ ವಿಜಯ್‌ಜೈನ್ ೨೦೧೫ರ ಏಪ್ರಿಲ್ ತಿಂಗಳಲ್ಲಿ ₹೧೭,೬೮೦ ಮೌಲ್ಯದ ‘ಲೆನೊವೊ ಸಿಸ್ಲೆ ಎಸ್‌೯೦’ ಫೋನ್‌ಅನ್ನು ಫ್ಲಿಪ್ ಕಾರ್ಟ್ ಮೂಲಕ ಖರೀದಿಸಿದ್ದರು. ೫ ತಿಂಗಳ ನಂತರ ಫೋನ್ ಕಾರ್ಯನಿರ್ವಹಿಸದ ಮಟ್ಟಕ್ಕೆ ತಲುಪಿತ್ತು. ಪರಿಣಾಮ ಸರಿಪಡಿಸುವಂತೆ ಲೆನೋವಾ ಸೇವಾ ಕೇಂದ್ರಕ್ಕೆ ಮನವಿ ಮಾಡಿದರೆ, ಫೋನ್ ಪರಿಶೀಲಿಸಿದ ಸೇವಾ ಕೇಂದ್ರದ ಸಿಬ್ಬಂದಿ, ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಹಾಜರಿಪಡಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್ ರಸೀದಿಯನ್ನು ಜೈನ್ ಸಲ್ಲಿಸಿದ್ದರು. ಆದ

ರೆ, ರಸೀದಿಯು ಮೊಬೈಲ್ ಫೋನ್‌ಗೆ ಹೊಂದಾಣಿಕೆಯಾಗುತ್ತಿಲ್ಲ. ಮೊಬೈಲ್‌ನಲ್ಲಿನ ಇಂಟರ್‌ನ್ಯಾಷನಲ್ ಮೊಬೈಲ್ ಎಕ್ವುಪ್‌ಮೆಂಟ್ ಐಡೆಂಟಿಟಿ (ಐಎಂಇಐ) ಸಂಖ್ಯೆಗೂ ಬಿಲ್‌ನಲ್ಲಿರುವ ಸಂಖ್ಯೆಗೂ ಸಂಬಂಧವೇ ಇಲ್ಲ. ಆದ್ದರಿಂದ ಮೊಬೈಲ್ ಫೋನ್ ಸರಿಪಡಿಸಲು ಸಾಧ್ಯವಿಲ್ಲ ಎಂದು ಸೇವಾ ಕೇಂದ್ರದ ಸಿಬ್ಬಂದಿ ಹಿಂದಿರುಗಿಸಿದ್ದರು.

ಇದರಿಂದ ಅಸಮಾಧಾನಗೊಂಡಿದ್ದ ವಿಜಯ್, ಮೊಬೈಲ್‌ಗೆ ಹೊಂದಾಣಿಕೆಯಾಗುವ ರಸೀದಿ ನೀಡು ವಂತೆ ಫ್ಲಿಪ್‌ಕಾರ್ಟ್ ಕಂಪನಿಗೆ ದೂರವಾಣಿ ಮೂಲಕ ಕರೆ ಮಾಡಿ ಮನವಿ ಮಾಡಿದ್ದರು. ಇ-ಮೇಲ್ ಮೂಲಕ ವೂ ಸಹ ಹಲವು ಬಾರಿ ವಿನಂತಿಸಿಕೊಂಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ತೀವ್ರ ಮಾನಸಿಕವಾಗಿ ಕುಗ್ಗಿಹೋಗಿದ್ದ ವಿಜಯ್ ಸುಮಾರು ₹೧೮ ಸಾವಿರ

ನೀಡಿ ಮತ್ತೊಂದು ಫೋನ್ ಖರೀದಿಸಿದ್ದರು. ನಕಲಿ ರಸೀದಿ ನೀಡುವ ಮೂಲಕ ಕಂಪನಿಯ ಮೇಲಿದ್ದ ನಮ್ಮ ವಿಶ್ವಾಸಕ್ಕೆ ಧಕ್ಕೆ ಮಾಡಲಾಗಿದೆ. ಅಲ್ಲದೆ, ಗ್ರಾಹಕರನ್ನು ವಂಚಿಸುವುದಕ್ಕಾಗಿಯೇ ಈ ರೀತಿಯಲ್ಲಿ ನಡೆದುಕೊಳ್ಳಲಾಗಿದ್ದು, ಹಣ ಹಿಂತಿರುಗಿಸಲು ಸೂಚಿಸಬೇಕು ಎಂದು ಗ್ರಾಹಕರ ಹಕ್ಕುಗಳ ನ್ಯಾಯಾಲಯದಲ್ಲಿದೂರು ಸಲ್ಲಿಸಿದ್ದರು

ಕಂಪನಿಯ ಆಕ್ಷೇಪಣೆ: ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದ ಫ್ಲಿಪ್‌ಕಾರ್ಟ್ ವಕೀಲರು, ನಮ್ಮ ಕಕ್ಷಿದಾರರು ಒಂದು ಕಂಪನಿಯ ಉತ್ಪನ್ನಗಳನ್ನು ಗ್ರಾಹಕರಿಗೆ ವಿತರಣೆ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ರಿಸೀದಿಗೂ ಕಂಪನಿಗೂ ಸಂಬಂಧವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದಾಗಿ ದೂರು ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.

Follow Us:
Download App:
  • android
  • ios