Asianet Suvarna News Asianet Suvarna News

ಸರಕಾರಕ್ಕೆ 72 ಗಂಟೆಗಳ ಡೆಡ್‌ ಲೈನ್ ನೀಡಿದ ವೀರ ಯೋಧನ ತಂದೆ

ಮಗನನ್ನು ಕೊಂದವರನ್ನು 72 ಗಂಟೆಯೊಳಗೆ ಹುಡುಕಿ ಸಾಯಿಸದಿದ್ದರೆ ತಾನೇ ಸ್ವತಃ  ಹುಡುಕಿ ಹತ್ಯೆ ಮಾಡುವುದಾಗಿ ಉಗ್ರರಿಂದ ಹತ್ಯೆಗೀಡಾದ ಸೈನಿಕನ ತಂದೆ ಆವೇಶ ಹೊರಹಾಕಿದ್ದಾರೆ.

Find and shoot killers of my son within 72 hours: Soldier's father sets deadline
Author
Bengaluru, First Published Jun 15, 2018, 5:21 PM IST

ಶ್ರೀನಗರ ಜೂನ್ 15:  ಮಗನನ್ನು ಕೊಂದವರನ್ನು 72 ಗಂಟೆಯೊಳಗೆ ಹುಡುಕಿ ಸಾಯಿಸದಿದ್ದರೆ ತಾನೇ ಸ್ವತಃ  ಹುಡುಕಿ ಹತ್ಯೆ ಮಾಡುವುದಾಗಿ ಉಗ್ರರಿಂದ ಹತ್ಯೆಗೀಡಾದ ಸೈನಿಕನ ತಂದೆ ಆವೇಶ ಹೊರಹಾಕಿದ್ದಾರೆ.

ಕೆಲ ದಿನಗಳಿಂದ ಸುಮ್ಮನಾಗಿದ್ದ ಉಗ್ರರು ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದು ರಜೌರಿ ನಿವಾಸಿಯಾಗಿದ್ದ ಯೋಧ ಔರಂಗಜೇಬ್  ಎಂಬುವರನ್ನು ಅಪಹರಿಸಿ ಹತ್ಯೆ ಮಾಡಿದ್ದರು. ಗುಂಡಿನ ದಾಳಿಯಿಂದ ಸಂಪೂರ್ಣ ಛಿದ್ರಗೊಂಡ ಯೋಧನ ದೇಹ ಪುಲ್ವಾಮಾ ಜಿಲ್ಲೆಯಲ್ಲಿ ಪತ್ತೆಯಾಗಿತ್ತು.

ಪುತ್ರನಿಗೆ ಅಂತಿಮ ನಮನ ಸಲ್ಲಿಸಿದ ತಂದೆ ಸರಕಾರಕ್ಕೆ ಉಗ್ರರನ್ನು ಹತ್ಯೆ ಮಾಡದೇ ಇರಲು ಕಾರಣಗಳೇ ಇಲ್ಲ. ಕಾಶ್ಮೀರ ಪ್ರತ್ಯೇಕವಾದಿಗಳು ಪಾಕಿಸ್ತಾನದ ಪರ ಸಹಾನುಭೂತಿ ತೋರಿಸುತ್ತಿದ್ದಾರೆ. ಯಾವ ಕಾರಣಕ್ಕೂ ಉಗ್ರರನ್ನು ಸರಕಾರ ಬೆಳೆಯಲು ಬಿಡಬಾರದು.  ದೇಶದ ಬಳಿ ಸಾಧ್ಯವಾದ್ದರೆ ನನ್ನ ಮಗನ ಸಾವಿಗೆ ಕಾರಣರಾದವರಿಗೆ ನಾನೇ ಅಂತ್ಯ ಕಾಣಿಸುತ್ತೇನೆ ಎಂದಿದ್ದಾರೆ.  ಹಿಜ್ಬುಲ್ ಮುಜಾಹಿದ್ದೀನ್  ಉಗ್ರಟೈಗರ್ ನನ್ನು ಹತ್ಯೆಮಾಡಿದ್ದ ಸೇನಾಪಡೆಯಲ್ಲಿದ್ದ ಯೋಧನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

Follow Us:
Download App:
  • android
  • ios