ಇನ್ನು ಕಂಬಳ ಉಳಿವಿಗಾಗಿ ಸುವರ್ಣನ್ಯೂಸ್ ವಿಶೇಷ ಅಭಿಯಾನ ಕೂಡಾ ನಡೆಸಿತ್ತು. ಇದೀಗ ಕಂಬಳ ಕ್ರೀಡೆಗೆ ಅನುಮತಿ ಸಿಕ್ಕಿದ್ದು ಸುವರ್ಣನ್ಯೂಸ್ ಅಭಿಯಾನಕ್ಕೆ ಜಯ ಸಿಕ್ಕಂತಾಗಿದೆ.
ಬೆಂಗಳೂರು(ಫೆ.13): ನಿರಂತರ ಹೋರಾಟದ ಬಳಿಕ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗಿದ್ದ ಕಾನೂನು ತೊಡಕು ನಿವಾರಣೆಯಾಗಿದೆ. ಅದೇ ರೀತಿ ಈಗ ನಿಷೇಧಿತ ಕಂಬಳ ಕ್ರೀಡೆಗೂ ಸಮ್ಮತಿ ಸಿಕ್ಕಿದೆ. ವಿಧಾನಸಭೆಯಲ್ಲಿಂದು ಪ್ರಾಣಿ ಹಿಂಸೆ ತಡೆಗಟ್ಟುವ ವಿಧೇಯಕ ಅಂಗೀಕಾರವಾಗಿದ್ದು ಕಂಬಳ ಮತ್ತು ಹೋರಿ ಬೆದರಿಸುವ ಕ್ರೀಡೆ ನಡೆಸಲು ಹಸಿರು ನಿಶಾನೆ ಸಿಕ್ಕಿದೆ. ಇನ್ನು ಕಂಬಳ ಉಳಿವಿಗಾಗಿ ಸುವರ್ಣನ್ಯೂಸ್ ವಿಶೇಷ ಅಭಿಯಾನ ಕೂಡಾ ನಡೆಸಿತ್ತು. ಇದೀಗ ಕಂಬಳ ಕ್ರೀಡೆಗೆ ಅನುಮತಿ ಸಿಕ್ಕಿದ್ದು ಸುವರ್ಣನ್ಯೂಸ್ ಅಭಿಯಾನಕ್ಕೆ ಜಯ ಸಿಕ್ಕಂತಾಗಿದೆ.
