Asianet Suvarna News Asianet Suvarna News

ಶಿಕ್ಷಕರ ವರ್ಗಾವಣೆ ಸಂಬಂಧ ಅಂತಿಮ ಹಂತದ ಸಭೆ

ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಂತಿಮ ಸುತ್ತಿನ ಮಹತ್ವದ ಸಭೆ ಇಂದು ನಡೆಯಲಿದೆ. ಸಚಿವ ಸುರೇಶ್ ಕುಮಾರ್ ಅವರು ಅಂತಿಮ ಸುತ್ತಿನ ಸಭೆ ಕರೆದಿದ್ದು,ಇದರಲ್ಲಿ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ವರ್ಗಾವಣೆ ವಿಚಾರದಲ್ಲಿ ಇರುವ ಗೊಂದಲ ಪರಿಹಾರವಾಗದೇ ಇದ್ದಲ್ಲಿ ಹೋರಟಾಗಳೂ ನಡೆಯುವ ಸಾಧ್ಯತೆ ಇದೆ.

Final round meeting about teachers transfer in Karnataka
Author
Bangalore, First Published Sep 3, 2019, 8:47 AM IST

ಬೆಂಗಳೂರು(ಸೆ.03): ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಂತಿಮ ಸುತ್ತಿನ ಮಹತ್ವದ ಸಭೆ ಇಂದು ನಡೆಯಲಿದೆ. ಸಚಿವ ಸುರೇಶ್ ಕುಮಾರ್ ಅವರು ಅಂತಿಮ ಸುತ್ತಿನ ಸಭೆ  ಕರೆದಿದ್ದು,ಇದರಲ್ಲಿ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ವರ್ಗಾವಣೆ ವಿಚಾರದಲ್ಲಿ ಇರುವ ಗೊಂದಲ ಪರಿಹಾರವಾಗದೇ ಇದ್ದಲ್ಲಿ ಹೋರಟಾಗಳೂ ನಡೆಯುವ ಸಾಧ್ಯತೆ ಇದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ವಿಚಾರವಾಗಿ ಸಭೆ ಕರೆದಿರುವ ಸಚಿವ ಸುರೇಶ್ ಕುಮಾರ್ ವರ್ಗಾವಣೆ ಸಂಬಂಧ ಮಹತ್ವದ ತೀರ್ಮಾನ ಕೖಗೊಳ್ಳಿದ್ದಾರೆ. ಸಭೆಯಲ್ಲಿ ಪ್ರಮುಖ ಅಧಿಕಾರಿಗಳೂ, ಸಚಿವರು ಹಾಗೂ ಕೆಲವು ಶಿಕ್ಷಕರು ಭಾಗಿಯಾಗಲಿದ್ದಾರೆ. ವಿಕಾಸಸೌಧದಲ್ಲಿ ಶಿಕ್ಷಕರ ವರ್ಗಾವಣೆ ವಿಚಾರವಾಗಿ ಸಭೆ ನಡೆಯಲಿದೆ.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮತ್ತೆ ಶುರು

ದಶಕಗಳಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ‘ಎ’ ವಲಯದಿಂದ ‘ಸಿ’ ವಲಯಕ್ಕೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕಿದೆ. ಆದರೆ, ಈಗಾಗಲೇ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶಿಕ್ಷಕರು, ಹೇಗಾದರೂ ಮಾಡಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಯುತ್ತಿದ್ದಾರೆ. ಕಳೆದ ವಾರ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು. ಒಂದು ವೇಳೆ ಶಿಕ್ಷಕರ ವರ್ಗಾವಣೆ ವಿಚಾರ ಬಗೆಹರಿಯದೇ ಹೋದ್ರೆ ಶಿಕ್ಷಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ.

Follow Us:
Download App:
  • android
  • ios