Asianet Suvarna News Asianet Suvarna News

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮತ್ತೆ ಶುರು

ದಶಕಗಳಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ‘ಎ’ ವಲಯದಿಂದ ‘ಸಿ’ ವಲಯಕ್ಕೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕಿದೆ. ಆದರೆ, ಈಗಾಗಲೇ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶಿಕ್ಷಕರು, ಹೇಗಾದರೂ ಮಾಡಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಯುತ್ತಿದ್ದಾರೆ.

Teacher transfers likely to resume on august 22
Author
Bengaluru, First Published Aug 20, 2019, 12:40 PM IST

ಬೆಂಗಳೂರು (ಆ. 20): ಶಿಕ್ಷಕರ ಕಡ್ಡಾಯ ವರ್ಗಾವಣೆ ಹಾಗೂ ಘಟಕದ ಹೊರಗಿನ ವರ್ಗಾವಣೆಗೆ ವಿಧಾನ ಪರಿಷತ್‌ ಸದಸ್ಯರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಲು ಸರ್ಕಾರ ಅನುಮತಿ ನೀಡಿದೆ.

ಗುರುವಾರ ಅಥವಾ ಶುಕ್ರವಾರದಿಂದ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಮಂಗಳವಾರ ನೂತನ ವೇಳಾಪಟ್ಟಿಪ್ರಕಟಿಸುವುದಾಗಿ ಇಲಾಖೆ ಮೂಲಗಳು ತಿಳಿಸಿವೆ.

ಶಿಕ್ಷಕರಿಗೆ ಇದು ಗುಡ್ ನ್ಯೂಸ್ ..!

ದಶಕಗಳಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ‘ಎ’ ವಲಯದಿಂದ ‘ಸಿ’ ವಲಯಕ್ಕೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕಿದೆ. ಆದರೆ, ಈಗಾಗಲೇ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶಿಕ್ಷಕರು, ಹೇಗಾದರೂ ಮಾಡಿ ವರ್ಗಾವಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಯುತ್ತಿದ್ದಾರೆ.

ಈ ಶಿಕ್ಷಕರು ವಿಧಾನ ಪರಿಷತ್ತಿನ ಸದಸ್ಯರ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮುಖ್ಯಮಂತ್ರಿಗಳೊಂದಿಗೆ ಮಂಗಳವಾರ ಸಭೆ ನಡೆಸಲಿದ್ದಾರೆ. ಮತ್ತೊಂದು ಸುತ್ತಿನ ಚರ್ಚೆ ಬಳಿಕ ಮಂಗಳವಾರ ಸಂಜೆ ಹೊತ್ತಿಗೆ ವೇಳಾಪಟ್ಟಿಸಿದ್ಧಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಶಿಕ್ಷಕರ ವರ್ಗಾವಣೆ ನೀತಿ ಪ್ರಕಟ; ನೂತನ ನೀತಿಯಲ್ಲಿ ವರ್ಗಾವಣೆ ಪ್ರಮಾಣ ಶೇ.15ಕ್ಕೆ ಏರಿಕೆ

ಶಿಕ್ಷಕರ ವರ್ಗಾವಣೆ ಮಿತಿಯನ್ನು ಈ ಬಾರಿ ಶೇ.8 ರಿಂದ 15 ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಪೈಕಿ ಕೋರಿ ವರ್ಗಾವಣೆಗೆ ಶೇ.4ರಷ್ಟುನಿಗದಿ ಮಾಡಲಾಗಿದೆ. ವಿಶೇಷ ಪ್ರಕರಣಗಳಿಗೆ ಮಾತ್ರ ಅವಕಾಶ ದೊರೆಯುತ್ತಿದೆ. ಸಾಮಾನ್ಯ ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

Follow Us:
Download App:
  • android
  • ios