ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತು ಉಡುಪಿಯಲ್ಲಿ ನವೆಂಬರ್’ನಲ್ಲಿ ನಡೆಯುವ ‘ಧರ್ಮ ಸಂಸತ್’ನಲ್ಲಿ ದೇಶದ ಸಾಧು-ಸಂತರು ಕೈಗೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಕ್ಷೇತ್ರಿಯ ಕಾರ್ಯದರ್ಶಿ ಗೋಪಾಲ್ಜೀ ಹೇಳಿದ್ದಾರೆ.

ಉಡುಪಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತು ಉಡುಪಿಯಲ್ಲಿ ನವೆಂಬರ್’ನಲ್ಲಿ ನಡೆಯುವ ‘ಧರ್ಮ ಸಂಸತ್’ನಲ್ಲಿ ದೇಶದ ಸಾಧು-ಸಂತರು ಕೈಗೊಳ್ಳುವ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಕ್ಷೇತ್ರಿಯ ಕಾರ್ಯದರ್ಶಿ ಗೋಪಾಲ್ಜೀ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 25, 25, 26ರಂದು ಪೇಜಾವರ ಶ್ರೀಗಳ ಆತಿಥ್ಯದಲ್ಲಿ ಧರ್ಮ ಸಂಸತ್ ಸಂತರ ಸಮಾವೇಶ ನಡೆಯಲಿದೆ. ಇದರಲ್ಲಿ ದೇಶದ 2000ಕ್ಕೂ ಅಧಿಕ ಸಂತರು, ಮಠಾಧೀಶರು ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದಾರೆ. ಆ ನಿರ್ಣಯದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಪೇಜಾವರ ಶ್ರೀಗಳು ಕೃಷ್ಣಮಠದಲ್ಲಿ ಇಫ್ತಾರ್ ನಡೆಸುವುದಕ್ಕೆ ವಿಹಿಂಪ ಸಮ್ಮತಿಯಿಲ್ಲವೆಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.