ಶಾಲಾ ಹೆಣ್ಣುಮಕ್ಕಳು ಉಪಯೋಗಿಸುವ ಶೌಚಾಲಯದಲ್ಲಿ ಸಿಸಿ ಕ್ಯಾಮೆರಾ ಇಟ್ಟ  ಭಾರತೀಯ ಮೂಲದ ವಿಜ್ಞಾನ ಶಿಕ್ಷಕರೊಬ್ಬರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. 

ಲಂಡನ್(ಫೆ.16): ಶಾಲಾ ಹೆಣ್ಣುಮಕ್ಕಳು ಉಪಯೋಗಿಸುವ ಶೌಚಾಲಯದಲ್ಲಿ ಸಿಸಿ ಕ್ಯಾಮೆರಾ ಇಟ್ಟ ಭಾರತೀಯ ಮೂಲದ ವಿಜ್ಞಾನ ಶಿಕ್ಷಕರೊಬ್ಬರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಗ್ಲೆಂಡ್’ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಒಡೆದ್ರಾ ಎನ್ನುವ ವಿಜ್ಞಾನ ಶಿಕ್ಷಕರು ತಾವು ಕೆಲಸ ಮಾಡಿದ್ದ ಮೂರು ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಮಧ್ಯಾಹ್ನ ಊಟದ ಸಂದರ್ಭದಲ್ಲಿ ಇವರು ಹೋಗಿ ಕ್ಯಾಮೆರಾ ಅಳವಡಿಸಿ ಬರುತ್ತಿದ್ದರು. ನಂತರ ಯಾರೂ ಇಲ್ಲದೇ ಇದ್ದಾಗ ಹೋಗಿ ತೆಗೆದುಕೊಂಡು ಬರುತ್ತಿದ್ದರು ಎಂದು ತಿಳಿದು ಬಂದಿದೆ.