Asianet Suvarna News Asianet Suvarna News

ಗಾಯಗೊಂಡಿರೋ ದರ್ಶನ್ ನತ್ತ ಕಣ್ಣೆತ್ತಿ ನೋಡದ ದಿನಕರ್: ಯಾಕೆ?

 ಕಾರು ಅಪಘಾತದಲ್ಲಿ ಕೈ‌ ಮುರಿದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್  ಅವರನ್ನು ಕನ್ನಡ ಚಿತ್ರರಂಗದ ಹಲವು ತಾರೆಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಆದರೆ, ನಿರ್ದೇಶಕ ದಿನಕರ್ ತೂಗುದೀಪ ಅವರು ಒಡಹುಟ್ಟಿದ ಸಹೋದರನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಲೇ ಇಲ್ಲ. ಏನು ಇದರ ಹಿಂದಿನ ಕಾರಣ? ಯಾಕೆ ಸಹೋದರನ ಅರೋಗ್ಯ ವಿಚಾರಿಸಿಲ್ಲ? ಇಲ್ಲಿದೆ ಕಾಣ.
 

Film Director Dinakar Thoogudeepa did not inquire about the Darshan Health Here is the Reason
Author
Bengaluru, First Published Sep 27, 2018, 11:47 AM IST
  • Facebook
  • Twitter
  • Whatsapp

ಬೆಂಗಳೂರು, [ಸೆ.27]: ಕಾರು ಅಪಘಾತದಲ್ಲಿ ಕೈ‌ ಮುರಿದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್  ಅವರನ್ನು ಕನ್ನಡ ಚಿತ್ರರಂಗದ ಹಲವು ತಾರೆಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

 ಸಚಿವ ಜಿ.ಟಿ. ದೇವೇಗೌಡ, ಸಂಸದ ಪ್ರತಾಪ್ ಸಿಂಗ್ ಸೇರಿದಂತೆ ಹಲವು ಗಣ್ಯರು ಮೈಸೂರಿನ ಕೋಲಂಬಿಯಾ ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ವಿಚಾರಿಸಿದ್ದರು. ಅಷ್ಟೇ ಅಲ್ಲದೇ ಸಾವಿರಾರು ಅಭಿಮಾನಿಗಳು ದರ್ಶನ್ ಅವರನ್ನು ನೋಡಲು ಆಸ್ಪತ್ರೆಗೆ ಬಂದಿದ್ದರು.

ದರ್ಶನ್ ಆರೋಗ್ಯ ಸ್ಥಿತಿ ಬಗ್ಗೆ ವಿಜಯಲಕ್ಷ್ಮೀ ಪ್ರತಿಕ್ರಿಯೆ

ಆದರೆ,  ನಿರ್ದೇಶಕ ದಿನಕರ್ ತೂಗುದೀಪ ಅವರು ಒಡಹುಟ್ಟಿದ ಸಹೋದರನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಲೇ ಇಲ್ಲ. ಇದಕ್ಕೆ ಕೆಲವರು ನಾನಾ ಅರ್ಥಗಳನ್ನು ಕಲ್ಪಿಸಿದ್ದರು.  ದರ್ಶನ್ ಅವರ ಭೇಟಿಯಾಗದಿದ್ದಕ್ಕೆ ಬೇರೆ ಕಾರಣವೇ ಇದೆ. 

ಆ್ಯಕ್ಸಿಡೆಂಟ್ ಬಳಿಕ ಮಾಯಾವಾಗಿದ್ದ ದರ್ಶನ್ ಕಾರ್ ಪತ್ತೆ: ಎಲ್ಲಿತ್ತು?

ಕಾರಣ ಏನು?
ದಿನಕರ್ ತೂಗುದೀಪ ಕಳೆದ ಒಂದು ವಾರದಿಂದ ವೈರಲ್ ಫೀವರ್ ನಿಂದ ಬಳಲುತ್ತಿದ್ದಾರೆ. ಇದರಿಂದ ಕಾರು ಅಪಘಾತದಲ್ಲಿ ಕೈ‌ ಮುರಿದುಕೊಂಡ ದರ್ಶನ್ ನೋಡಲು ದಿನಕರ್ ಆಸ್ಪತ್ರೆಯ ಬಳಿ ಕಾಣಿಸಿಕೊಳ್ಳಲಿಲ್ಲ. ಆದರೆ, ಪ್ರತಿ‌ನಿತ್ಯ‌ ದರ್ಶನ್ ಜೊತೆಯಲ್ಲಿ ಪ್ರತಿ‌ನಿತ್ಯ‌ ದೂರವಾಣಿ ಮೂಲಕ  ಆರೋಗ್ಯ ವಿಚಾರಿಸಿದ್ದಾರೆ.

Follow Us:
Download App:
  • android
  • ios