Asianet Suvarna News Asianet Suvarna News

ಆ್ಯಕ್ಸಿಡೆಂಟ್ ಬಳಿಕ ಮಾಯಾವಾಗಿದ್ದ ದರ್ಶನ್ ಕಾರ್ ಪತ್ತೆ: ಎಲ್ಲಿತ್ತು?

ಅಪಘಾತವಾದ ಬಳಿಕ ಮಾಯಾವಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಕೊನೆಗೂ ಪತ್ತೆಯಾಗಿದೆ.

Actor Darshan car Brought to VV Puram Police Station from His Friend farm House
Author
Bengaluru, First Published Sep 24, 2018, 3:53 PM IST
  • Facebook
  • Twitter
  • Whatsapp

ಮೈಸೂರು, [ಸೆ.24]: ಅಪಘಾತವಾದ ಬಳಿಕ ಮಾಯಾವಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಕೊನೆಗೂ ಪತ್ತೆಯಾಗಿದೆ. ಶ್ರೀರಂಗಪಟ್ಟಣದಲ್ಲಿರುವ ದರ್ಶನ್ ಅವರ ಸ್ನೇಹಿತನ ತೋಟದಲ್ಲಿ ಪತ್ತೆಯಾಗಿದ್ದು, ವಿ.ವಿ. ಪುರಂ ಸಂಚಾರಿ ಪೊಲೀಸ್ ಠಾಣೆಗೆ ತರಲಾಗಿದೆ.

ದರ್ಶನ್ ಕಾರು ಅಪಘಾತ ಕೇಸ್ ಗೆ ಟ್ವಿಸ್ಟ್

ಇಂದು [ಸೋಮವಾರ] ನಸುಕಿನ ಜಾವ ಸಂಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರ್ ಅಪಘಾತಕ್ಕೀಡಾಗಿತ್ತು. ಆದರೆ, ಅಪಘಾತದ ಸ್ಥಳದಿಂದ ಕಾರು ಮಯಾವಾಗಿತ್ತು. ಅಷ್ಟೇ ಅಲ್ಲದೇ ಪೊಲೀಸರು ಸಹ ಕಾರಿನ ಬಗ್ಗೆ ಅಥವಾ ಅಪಘಾತದ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. 

ದರ್ಶನ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ : ಕೊಲಂಬಿಯಾ ಆಸ್ಪತ್ರೆ ಸ್ಪಷ್ಟನೆ

ಇದ್ರಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಅಪಘಾತ ಸ್ಥಳದಿಂದ ಕಾರನ್ನು ಯಾರು ತೆಗೆದುಕೊಂಡು ಹೋದ್ರು? ಯಾತಕ್ಕಾಗಿ ಕಾರನ್ನು ಬಚ್ಚಿಡಲಾಗಿತ್ತು? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ಕಾರು ಮೈಸೂರಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಿಂತಿದ್ದು, ಆರ್‌ಟಿಓ ಅಧಿಕಾರಿಗಳು ಬಂದ ಬಳಿಕ ಕಾರಿನ ಪರಿಶೀಲನೆ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದರ್ಶನ್ ಕಾರ್ ಆ್ಯಕ್ಸಿಂಡೆಂಟ್ ನ ಸುದ್ದಿಗಳು

Follow Us:
Download App:
  • android
  • ios