ಸಿಲಿಕಾನ್ ಸಿಟಿಯ ಸಾಂಸ್ಕೃತಿಕ ಮಹೋತ್ಸವ, ರಾಜಧಾನಿಯ ಊರ ಜಾತ್ರೆ ಅಂದ್ರೆ.. ಬೆಂಗಳೂರು ಕರಗ. ಕೋಟ್ಯಾಂತರ ಭಕ್ತರ ಸಮ್ಮುಖದಲ್ಲಿ ಧರ್ಮರಾಯಸ್ವಾಮಿ ಕರಗ ವಿಶ್ವ ಪ್ರಸಿದ್ಧಿಯನ್ನ ಪಡೆದಿದೆ. ಆದ್ರೆ, ಇಂತಹ ವಿಶ್ವ ಪ್ರಸಿದ್ಧ ಕರಗ ಮಹೋತ್ಸವಕ್ಕೂ ಕುಲಸ್ಥರ ವ್ಯಾಜ್ಯದ ಕಪ್ಪು ಚುಕ್ಕೆ ಅಂಟಿದೆ.
ಬೆಂಗಳೂರು(ಜು.16): ಸಿಲಿಕಾನ್ ಸಿಟಿಯ ಸಾಂಸ್ಕೃತಿಕ ಮಹೋತ್ಸವ, ರಾಜಧಾನಿಯ ಊರ ಜಾತ್ರೆ ಅಂದ್ರೆ.. ಬೆಂಗಳೂರು ಕರಗ. ಕೋಟ್ಯಾಂತರ ಭಕ್ತರ ಸಮ್ಮುಖದಲ್ಲಿ ಧರ್ಮರಾಯಸ್ವಾಮಿ ಕರಗ ವಿಶ್ವ ಪ್ರಸಿದ್ಧಿಯನ್ನ ಪಡೆದಿದೆ. ಆದ್ರೆ, ಇಂತಹ ವಿಶ್ವ ಪ್ರಸಿದ್ಧ ಕರಗ ಮಹೋತ್ಸವಕ್ಕೂ ಕುಲಸ್ಥರ ವ್ಯಾಜ್ಯದ ಕಪ್ಪು ಚುಕ್ಕೆ ಅಂಟಿದೆ.
ಈ ರೀತಿ ‘ಇದು ಅಕ್ರಮ ಪ್ರವೇಶ, ನೀವೆಲ್ಲಾ ಅನುಭವಿಸ್ತೀರಿ’.. ಅಂತ ಪ್ರತಿಭಟಿಸ್ತಿರುವ ದೃಶ್ಯ ಪ್ರಸಿದ್ಧ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ. ಭಕ್ತರಿಂದ ಕೂಡಿರಬೇಕಾದ ಈ ದೇವಾಲಯ ಫುಲ್ ಖಾಕಿಮಯವಾಗಿತ್ತು. ದೇವರನ್ನು ಪುಜಿಸುವ ಅರ್ಚಕರ ಕುಲದವರು ಕೈ ಕೈ ಮಿಲಾಯಿಸಲು ಮುಂದಾಗಿದ್ದರು.
ಕರಗಕ್ಕೂ ಕುಲಸ್ಥರ ಕಲಹ..!
ತೀವ್ರ ವಿರೋಧದ ಮಧ್ಯೆಯು ಧರ್ಮರಾಯನ ದೇವಾಲಯಕ್ಕೆ ಹೊಸ ಅರ್ಚಕ ಮನು ಗರ್ಭಗುಡಿ ಪ್ರವೇಶ ಆಗೇ ಹೋಯ್ತು. ಆದ್ರೆ ಕರಗದ ಪೂಜಾರಿ ಜ್ಞಾನೇಂದ್ರ ಅವ್ರ ಬಣದವ್ರು ಇದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಮುಜರಾಯಿ ಇಲಾಖೆ ನೇಮಿಸಿರುವ ನೂತನ ಅರ್ಚಕನಿಗೆ ಕರಗ ಹೊರಲು ಅನುಮತಿ ನೀಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪೊಲೀಸ್ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ಜೊತೆ ನೂತನ ಅರ್ಚಕ ಮನು ಗರ್ಭಗುಡಿ ಪ್ರವೇಶಿಸಿದ್ದಾರೆ.
ಕರಗದ ಪೂಜಾರಿ ಜ್ಞಾನೇಂದ್ರ ಅವರು ನಮ್ಮ ಕುಲಸ್ಥರು ಮಾತ್ರ ಕರಗದ ಪೂಜಾರಿಯಾಗಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಕರಗದ ಪೂಜಾರಿಗೆ ಇರಬೇಕಾದ ಅರ್ಹತೆಗಳು ಅವರ ಕುಲದ ನಾಲ್ವರಲ್ಲೂ ಇಲ್ಲ. ಆ ಅರ್ಹತೆಗಳೇನಪ್ಪಾ ಅಂದ್ರೆ
ಕರಗದ ಪೂಜಾರಿ ಅರ್ಹತೆ
ಕರಗ ಹೊರಬೇಕು ಅಂದರೆ ಆ ಅರ್ಚಕ ವಿವಾಹಿತನಾಗಿರಬೇಕು. ಕರಗದ ಪೂಜಾರಿಗೆ ಸಹಾಯಕ ಪೂಜಾರಿಯಾಗಿ ಕೆಲಸ ಮಾಡಿರಬೇಕು. ಕರಗದ ಮಹತ್ವ, ಮಡಿಂತಿಕೆ, ಪೂಜೆ ಪುನಸ್ಕಾರಗಳನ್ನ ತಿಳಿದಿರಬೇಕು.
ಆದರೆ ಜ್ಞಾನೇಂದ್ರ ಬಣದ ನಾಲ್ವರು ಅರ್ಚಕರು ಇದಕ್ಕೆ ಅರ್ಹರಲ್ಲ. ಒಬ್ಬರಿಗೆ ತರಬೇತಿ ಇಲ್ಲ. ಇನ್ನೊಬ್ಬರಿಗೆ ಮದುವೆಯೇ ಆಗಿಲ್ಲ. ಹೀಗಾಗಿ ಮುಜರಾಯಿ ಇಲಾಖೆ ಮನು ಅವ್ರನ್ನ ನೂತನ ಅರ್ಚಕರನ್ನಾಗಿ ನೇಮಿಸಿದೆ. ಸಂಪ್ರದಾಯದ ಪ್ರಕಾರ ವಹ್ಲಿಕುಲ ಕ್ಷತ್ರಿಯ ಕುಲದವರು ಆಯ್ಕೆ ಮಾಡಿದವ್ರನ್ನೇ ಮುಜರಾಯಿ ಇಲಾಖೆ ನೇಮಕ ಮಾಡಬೇಕೆಂಬ ನಿಯಮ ಧಾರ್ಮಿಕ ದತ್ತಿ ಇಲಾಖೆಯಲ್ಲಿದೆ. ಆದ್ರೆ ಇದನ್ನ ಮುಜರಾಯಿ ಇಲಾಖೇ ಉಲ್ಲಂಘಿಸಿದೆ ಎಂದು ವಹ್ಲಿಕುಲ ವಶಂಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಒಟ್ಟಿನಲ್ಲಿ ವಿಶ್ವವಿಖ್ಯಾತ ಕರಗವನ್ನು ಕುಲಸ್ಥರ ಕಲಹ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ.
