Asianet Suvarna News Asianet Suvarna News

ಪಕ್ಷ ದ್ರೋಹಿ ಶಿವರಾಮೇಗೌಡರಿಗೆ ಮತ ಹಾಕುವುದು ಹೇಗೆ ?

ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಇತಿಶ್ರೀ ಮಾಡಿದ್ದೀರಾ. ಈಗ ಹೊಂದಾಣಿಕೆ ನೆಪದಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವಂತೆ ಕೋರುತ್ತೀರಾ. ಕಳೆದ 2 ಬಾರಿ ಚುನಾವಣೆಯಲ್ಲಿ ರೈತಸಂಘವನ್ನು ಬೆಂಬಲಿಸಿದೆವು. ಕ್ಷೇತ್ರದಲ್ಲಿ ನಮ್ಮ ಸ್ಥಿತಿಗತಿ ಯಾರು ಕೇಳಲಿಲ್ಲ. ಪಕ್ಷ ಇಲ್ಲಿ ಅಧೋಗತಿಯಾಗಿದೆ. ಇಂತಹ ಪಕ್ಷದಲ್ಲಿ ನಾವು ಏಕೆ ಇರಬೇಕು ಎಂದು ಕಾರ್ಯಕರ್ತರು ಸಭೆಯಲ್ಲಿ ನಾಯಕರನ್ನು ನೇರವಾಗಿ ಪ್ರಶ್ನೆ ಮಾಡಿದರು.

Fight between the followers of Congress and JDS at Mandya
Author
Bengaluru, First Published Oct 30, 2018, 8:16 PM IST

ಪಾಂಡವಪುರ[ಅ.30]: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮಂಡ್ಯ ಜಿಲ್ಲೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮೈತ್ರಿ ವಿರೋಧಿಸಿ ಕಾರ್ಯಕರ್ತರು ನಾಯಕರ ವಿರುದ್ಧ ಹಾರಿಹಾಯ್ದ ಘಟನೆ ಸೋಮವಾರ ಜರುಗಿತು.

ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಇತಿಶ್ರೀ ಮಾಡಿದ್ದೀರಾ. ಈಗ ಹೊಂದಾಣಿಕೆ ನೆಪದಲ್ಲಿ ಜೆಡಿಎಸ್‌ಗೆ ಬೆಂಬಲ ನೀಡುವಂತೆ ಕೋರುತ್ತೀರಾ. ಕಳೆದ 2 ಬಾರಿ ಚುನಾವಣೆಯಲ್ಲಿ ರೈತಸಂಘವನ್ನು ಬೆಂಬಲಿಸಿದೆವು. ಕ್ಷೇತ್ರದಲ್ಲಿ ನಮ್ಮ ಸ್ಥಿತಿಗತಿ ಯಾರು ಕೇಳಲಿಲ್ಲ. ಪಕ್ಷ ಇಲ್ಲಿ ಅಧೋಗತಿಯಾಗಿದೆ. ಇಂತಹ ಪಕ್ಷದಲ್ಲಿ ನಾವು ಏಕೆ ಇರಬೇಕು ಎಂದು ಕಾರ್ಯಕರ್ತರು ಸಭೆಯಲ್ಲಿ ನಾಯಕರನ್ನು ನೇರವಾಗಿ ಪ್ರಶ್ನೆ ಮಾಡಿದರು.

ಪಟ್ಟಣದ ವೆಂಕಟೇಶ್ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವರಾದ ಎಚ್.ಸಿ.ಮಹದೇವಪ್ಪ, ಜಯಚಂದ್ರ, ಮಂಡ್ಯ ಉಸ್ತುವಾರಿ ಸಂಪಂಗಿಯವರ ಬೆವರಿಳಿಸಿದ ಕಾರ್ಯಕರ್ತರನ್ನು ಸಮಾಧಾನ ಪಡಿಸುವಲ್ಲಿ ಹೆಣಗಾಟ ಮಾಡಬೇಕಾಯಿತು. ಪಕ್ಷದ್ರೋಹಿ ಶಿವರಾಮೇಗೌಡ: ಶಿವರಾಮೇಗೌಡ ಕಾಂಗ್ರೆಸ್ ಪಕ್ಷದ ದ್ರೋಹಿಯಾಗಿದ್ದಾರೆ. ಅಂತಹವರಿಗೆ ನಾವು ಬೆಂಬಲ ಕೊಡುವುದು ಹೇಗೆ. ಈ ಮೈತ್ರಿ
ಮಾಡಿಕೊಳ್ಳುವ ಮುಂಚೆ ಸ್ಥಳೀಯ ಕಾರ್ಯಕರ್ತರ ಸ್ಥಿತಿಗತಿ ಕೇಳಿದ್ದೀರಾ. ಕಳೆದ ಬಾರಿ ರೈತ ಸಂಘವನ್ನು ಬೆಂಬಲಿಸಿ ಎಂದು ಹೇಳಿದಿರಿ. ಈಗ ಜೆಡಿಎಸ್ ಮತ್ತು ಶಿವರಾಮೇಗೌಡರನ್ನು ಬೆಂಬಲಿಸಿ ಎಂದು ಹೇಳುತ್ತೀರಿ. ಹೀಗೆ ಮುಂದುರೆದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಲಿದೆ ಎಂದು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಅಧಿಕಾರ ಪಡೆದು ಪಕ್ಷ ದ್ರೋಹಿಯಾಗಿರುವ ಎಲ್.ಆರ್ . ಶಿವರಾಮೇಗೌಡರಿಗೆ ಮತ ಹಾಕುವುದು ಹೇಗೆ ಎಂದು ನಾಯಕರನ್ನು ಪ್ರಶ್ನೆ ಮಾಡಿದರು. ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು, ನಾಯಕರಿಂದ ನಮಗೆ ನಿತ್ಯ ಕಿರುಕುಳವಿದೆ. ಇಂತಹ ಸ್ಥಿತಿಯಲ್ಲಿ ನಾವು ಜೆಡಿಎಸ್ ಅಭ್ಯರ್ಥಿಗೆ ಮತಹಾಕೋದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದಾಗಿ ಸಭೆಯಲ್ಲಿ ಕೆಲಕಾಲ ಕಾರ್ಯಕರ್ತರು ಮುಖಂಡರ ನಡುವೆ ಸಾಕಷ್ಟು ಗದ್ದಲ ಏರ್ಪಟ್ಟಿತ್ತು. ಈ ವೇಳೆ ಕಾರ್ಯಕರ್ತರ ಗಲಾಟೆಯನ್ನು ನಿಯಂತ್ರಿಸುವಲ್ಲಿ ಮುಖಂಡರು ಸಭೆ ಮುಗಿಯುವವರೆಗೂ ವಿಫಲರಾದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಕಾರ್ಯಕರ್ತರನ್ನು ಸಮಧಾನ ಪಡಿಸಲು ಬಂದಾಗ ಮುಗಿಬಿದ್ದರು. ಈ ಹಂತದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ಕಾರ್ಯಕರ್ತರ ಗಲಾಟೆಯಿಂದ ನಾಯಕರು ಹೈರಾಣಾದರು.

Follow Us:
Download App:
  • android
  • ios