ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಫೆಡರಲ್‌ ಕಮ್ಯೂನಿಕೇಷನ್‌ನ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಅಜಿತ್‌ ಪೈ ಅವರನ್ನು ನಿಯೋಜನೆ ಮಾಡಿದ್ದರು.

ವಾಷಿಂಗ್ಟನ್‌(ಮಾ.09): ಭಾರತದ ಟ್ರಾಯ್‌ನಂತೆ ಕಾರ್ಯ ನಿರ್ವಹಿಸುವ ಅಮೆರಿಕದ ಫೆಡರಲ್‌ ಕಮ್ಯೂನಿ ಕೇಷನ್‌ ಕಮಿಷನ್‌(ಎಫ್‌ಸಿಸಿ) ಅಧ್ಯಕ್ಷರನ್ನಾಗಿ ಬೆಂಗಳೂರು ಮೂಲದ ಅಮೆರಿಕನ್ನಿಗ ಅಜಿತ್‌ ಪೈ ಅವರನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾಮ ನಿರ್ದೇಶನಗೊಳಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಫೆಡರಲ್‌ ಕಮ್ಯೂನಿಕೇಷನ್‌ನ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಅಜಿತ್‌ ಪೈ ಅವರನ್ನು ನಿಯೋಜನೆ ಮಾಡಿದ್ದರು. ಇದಕ್ಕೂ ಮುನ್ನ ಪೈ ಎಫ್‌ಸಿಸಿಯ ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಅಜಿತ್‌ ಅವರ ತಂದೆ ಹೈದ್ರಾಬಾದ್‌ನವರಾಗಿದ್ದಾರೆ, ತಾಯಿ ಬೆಂಗಳೂರಿನವರು.