ಪತ್ನಿಯ ಪ್ರಿಯಕರ ಎಂದು ಮಗನನ್ನೇ ಕೊಚ್ಚಿ ಕೊಂದ..!

First Published 28, Jan 2018, 9:21 AM IST
Father Kill son
Highlights

ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರ ಎಂದು ತಪ್ಪಾಗಿ ಭಾವಿಸಿ, ಸ್ವಂತ ಮಗನನ್ನೇ ಕೊಡಲಿಯಿಂದ ಹೊಡೆದ ಆಘಾತಕಾರಿ ಘಟನೆ ಆಂಧ್ರದ ಕರ್ನೂಲ್‌ನ ಗುತುಪಲ್ಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕರ್ನೂಲ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರ ಎಂದು ತಪ್ಪಾಗಿ ಭಾವಿಸಿ, ಸ್ವಂತ ಮಗನನ್ನೇ ಕೊಡಲಿಯಿಂದ ಹೊಡೆದ ಆಘಾತಕಾರಿ ಘಟನೆ ಆಂಧ್ರದ ಕರ್ನೂಲ್‌ನ ಗುತುಪಲ್ಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

14ರ ಹರೆಯದ ಪರಶುರಾಮ ತಂದೆಯಿಂದಲೇ ದಾಳಿಗೊಳಗಾದ ಬಾಲಕ. ಆರೋಪಿಯ ಪತ್ನಿಗೆ ಅಕ್ರಮ ಸಂಬಂಧ ಇತ್ತು.

ಹೀಗಾಗಿ ಶುಕ್ರವಾರ ತಾಯಿಯ ಜೊತೆ ಮಲಗಿದ್ದ ಪುತ್ರನನ್ನೇ, ಪತ್ನಿಯ ಪ್ರಿಯಕರ ಎಂದು ಭಾವಿಸಿದ ಸೋಮಣ್ಣ ಕೋಪದ ಭರದಲ್ಲಿ ಬಾಲಕನ ಮೇಲೆ ಕೊಡಲಿಯಿಂದ ಹೊಡೆದು ಗಾಯಗೊಳಿಸಿದ್ದಾನೆ. ಬಳಿಕ ದಾಳಿಗೆ ತುತ್ತಾಗಿದ್ದು ಪುತ್ರ ಎಂದು ತಿಳಿದು ಕಣ್ಣೀರಿಟ್ಟಿದ್ದಾನೆ.

loader