ರಸ್ತೆಯಲ್ಲಿ ಯಾರಾದರೂ ಸರಿಯಾಗಿ ವಾಹನ ಚಲಾಯಿಸದೇ, ಯರ್ರಾಬಿರ್ರಿ ಓಡಿಸಿದರೆ ಸಹಜವಾಗಿ ಬುದ್ದಿವಾದ ಹೇಳುತ್ತಾರೆ. ಹೀಗೆ ಬುದ್ದಿವಾದ ಹೇಳಿದವರ ಮೇಲೆ ಅಪ್ಪ-ಮಗ ಸೇರಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಚಿತ್ರದುರ್ಗ(ಜ.30): ರಸ್ತೆಯಲ್ಲಿ ಯಾರಾದರೂ ಸರಿಯಾಗಿ ವಾಹನ ಚಲಾಯಿಸದೇ, ಯರ್ರಾಬಿರ್ರಿ ಓಡಿಸಿದರೆ ಸಹಜವಾಗಿ ಬುದ್ದಿವಾದ ಹೇಳುತ್ತಾರೆ. ಹೀಗೆ ಬುದ್ದಿವಾದ ಹೇಳಿದವರ ಮೇಲೆ ಅಪ್ಪ-ಮಗ ಸೇರಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗುಡ್ಡದಸಂತೇನಹಳ್ಳಿಯಲ್ಲಿ . ಸರಿಯಾಗಿ ಜೀಪ್ ಓಡಿಸು ಎಂದು ಬುದ್ಧಿಮಾತು ಹೇಳಿದಕ್ಕೆ ತಿಪ್ಪೇಸ್ವಾಮಿ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೆ ಜಗಳ ಬಿಡಿಸಲು ಬಂದ ತಿಪ್ಪೇಸ್ವಾಮಿ ಹೆಂಡತಿ ಮಮತಾಳ ಮೇಲೂ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ತಲೆ ಮತ್ತು ಕೈಗಳು ಮುರುದು ಹೋಗುವಂತೆ ಹೊಡೆದಿದ್ದಾರೆ.

ಸಾಕ್ಷಪ್ಪ ಎಂಬಾತ ಈ ರೀತಿ ಪುಂಡಾಟಿಕೆ ಮೆರೆದಿದ್ದಾನೆ. ಈತನಿಗೆ ಈತನ ತಂದೆ ಮಹಾದೇವಪ್ಪ ಕೂಡಾ ಸಾಥ್​ ನೀಡಿದ್ದಾನೆ. ಮೊದಲಿನಿಂದಲೂ ಸಾಕ್ಷಪ್ಪ ನಡುವಳಿಕೆ ಸರಿಯಾಗಿಲ್ಲ. ಕೆಲ ವರ್ಷಗಳ ಹಿಂದೆ ತಿಪ್ಪೇಸ್ವಾಮಿ ಮಮತಾ ದಂಪತಿ ಮಗಳ ಕೈಹಿಡಿದು ಎಳೆದಾಡಿ ಬಸ್ ಸ್ಟಾಂಡ್ನಲ್ಲಿನಲ್ಲಿ ಒದೆ ತಿಂದು ಪೊಲೀಸ್ ಅತಿಥಿಯಾಗಿದ್ದ. ಆಗ ಪ್ರಕರಣ ವಾಪಸ್ ಪಡೆಯುವಂತೆ ಇನ್ನಿಲ್ಲದೆ ಕರಸರತ್ತು ನಡೆಸಿದ್ದ ಇದೇ ದ್ವೇಷ ಇಟ್ಟುಕೊಂಡು ಈಗ ಬುದ್ದಿಮಾತಿಗೆ ಹಲ್ಲೆಮಾಡಿ ದ್ವೇಷ ತೀರಿಸಿಕೊಂಡಿದ್ದಾನಂತೆ.