ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್ (ಏಮ್ಸ್)ನ ವೈದ್ಯರು ನೀಡಿರುವ ವರದಿ ಬಗ್ಗೆ ಕುಟುಂಬ ಸದಸ್ಯರು ಸಂಶಯವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಚೆನ್ನೈ'ನ ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
ನವದೆಹಲಿ (ಮಾ.14): ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಆತನನ್ನು ಕೊಲೆಮಾಡಲಾಗಿದೆ ಎಂದು ನಿನ್ನೆ ಜವಾಹರ್’ಲಾಲ್ ನೆಹರೂ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಶೋಧನಾ ವಿದ್ಯಾರ್ಥಿಯ ತಂದೆ ಆರೋಪಿಸಿದ್ದಾರೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್ (ಏಮ್ಸ್)ನ ವೈದ್ಯರು ನೀಡಿರುವ ವರದಿ ಬಗ್ಗೆ ಕುಟುಂಬ ಸದಸ್ಯರು ಸಂಶಯವ್ಯಕ್ತಪಡಿಸಿದ್ದಾರೆನ್ನಲಾಗಿದೆ
ಜೆಎನ್’ಯುನಲ್ಲಿ ಪಿಎಚ್’ಡಿ ಮಾಡುತ್ತಿರುವ 27 ವರ್ಷ ಪ್ರಾಯದ ತಮಿಳುನಾಡಿನ ಮುತ್ತುಕೃಷ್ಣನ್ ಜೀವನಂತಮ್ (ರಜನಿ ಕೃಶ್) ಮೃತದೇಹ ಸ್ನೇಹಿತರೊಬ್ಬರ ನಿವಾಸದಲ್ಲಿ ನೇಣು ಹಾಕಿಕೊಂಡ ಸಿಥಿಯಲ್ಲಿ ಪತ್ತೆಯಾಗಿತ್ತು.
ಸಾಮಾಜಿಕ ಹೋರಾಟಗಳಲ್ಲಿ ಸಕ್ರೀಯನಾಗಿದ್ದ ಮುತ್ತುಕೃಷ್ಣನ್, ವಿವಿಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿಯೆತ್ತುತ್ತಿದ್ದನು ಎನ್ನಲಾಗಿದೆ.
ಮುತ್ತುಕೃಷ್ಣನ್ ಇತ್ತೀಚೆಗೆ ಮಾನಸಿಕವಾಗಿ ಖಿನ್ನನಾಗಿದ್ದನು, ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲವೆಂದು ಪೊಲೀಸರು ಹೇಳಿದ್ದಾರೆ.
