ರೈತ ಪ್ರತಿಭಟನೆ ಮುಂಖಡರು ರೈತರಲ್ಲ, ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ; ಡಿ.12ರ ಟಾಪ್ 10 ಸುದ್ದಿ!

ರೈತ ಪ್ರತಿಭಟನೆ ಮುಂದಾಳತ್ವ ವಹಿಸಿರುವ 8 ಮುಖಂಡರು ರೈತರೇ ಅಲ್ಲ. ವೃತ್ತಿಯಲ್ಲಿ ವಕೀಲ, ಸಂಸದ ಸೇರಿದಂತೆ ಹಲವು ಕ್ಷೇತ್ರದ ಮುಖಂಡರು ಇದೀಗ ರೈತ ಸಂಘಟನೆಯ ಮುಂದಾಳತ್ವ ವಹಿಸಿದ್ದಾರೆ. ಅಮೆರಿಕಾದ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಕಲಿಸಲಾಗುತ್ತಿದೆ. ಪ್ರತಿಭಟನೆ ಕೈಬಿಡದಿದ್ರೆ ಸಾರಿಗೆ ನೌಕರರಿಗೆ ಪಾಠ ಕಲಿಸಲು ಸರ್ಕಾರ ಮುಂದಾಗಿದೆ. ರಜನಿಕಾಂತ್, ಯುವರಾಜ್ ಸಿಂಗ್ ಹುಟ್ಟು ಹಬ್ಬ, ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಸೇರಿದಂತೆ ಡಿಸೆಂಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Farmers Pertest to Preservation of Cattle Bill top 10 news of December 12 ckm

ರೈತ ಪ್ರತಿಭಟನೆಯ ಮುಂದಾಳತ್ವ ವಹಿಸಿರುವ 8 ಮುಖಂಡರು ಅಸಲಿಗೆ ರೈತರೇ ಅಲ್ಲ!...

Farmers Pertest to Preservation of Cattle Bill top 10 news of December 12 ckm

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ರಾಜಕೀಯ ಪಕ್ಷಗಳು, ಸೆಲೆಬ್ರೆಟಿಗಳು, ಕ್ರೀಡಾಪಟುಗಳು ಬೆಂಬಲ ಸೂಚಿಸಿದ್ದಾರೆ. ಮೋದಿ ಸರ್ಕಾರ ಕಂಡ ಬೃಹತ್ ಪ್ರತಿಭಟನೆಗಳಲ್ಲಿ ಸದ್ಯ ನಡೆಯುತ್ತಿರುವ ರೈತ ಪ್ರತಿಭಟನೆ ಒಂದಾಗಿದೆ. ಆದರೆ ಪ್ರತಿಭಟನೆಯ ಮುಂದಾಳತ್ವವಹಿಸಿರುವ ರೈತ ಸಂಘಟನೆಯ ನಾಯಕರು ಅಸಲಿಗೆ ರೈತರೇ ಇಲ್ಲ ಅನ್ನೋ  ಮಾಹಿತಿ ಹೊರಬಿದ್ದಿದೆ. ಅಸಲಿ ಸತ್ಯ ಇಲ್ಲಿದೆ.

ಅಮೆರಿಕಾದ ಶಾಲೆಯಲ್ಲಿ ಕನ್ನಡದ ಕಲರವ: ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ!...

Farmers Pertest to Preservation of Cattle Bill top 10 news of December 12 ckm

 ಕರ್ನಾಟಕದಲ್ಲಿ ಕನ್ನಡ ಬಳಕೆ ಕಡಿಮೆಯಾಗಿ ಇತರ ಭಾಷೆಗಳ ಅಧಿಪತ್ಯ ಹೆಚ್ಚಾಗುತ್ತಿದೆ ಎಂಬ ಕೂಗಿನ ನಡುವೆಯೇ ಅಮೆರಿಕಾದ ಶಾಲೆಯಲ್ಲಿ ಮೊದಲ ಬಾರಿಗೆ ವಿದೇಶಿ ಭಾಷೆಯಾಗಿ ಕನ್ನಡ ಕಲಿಯಲು ಅವಕಾಶ ನೀಡಲಾಗಿದೆ. ಇದು ಕನ್ನಡಿಗರು ಹಾಗೂ ಕರ್ನಾಟಕದ ಮಂದಿಗೆ ಹೆಮ್ಮೆ ಪಡುವಂತಹ ವಿಚಾರವಾಗಿದೆ.

ಪ್ರತಿಭಟನೆ ಕೈಬಿಡದಿದ್ರೆ ಸಾರಿಗೆ ನೌಕರರಿಗೆ ಪಾಠ ಕಲಿಸಲು ಸರ್ಕಾರ ಮಾಸ್ಟರ್ ಪ್ಲಾನ್!...

Farmers Pertest to Preservation of Cattle Bill top 10 news of December 12 ckm

ಸಾರಿಗೆ ನೌಕರರ ಮುಷ್ಕರ 3 ನೇ ದಿನಕ್ಕೆ ಕಾಲಿಟ್ಟಿದೆ. ನೌಕರರು ಪ್ರತಿಭಟನೆಯನ್ನು ವಾಪಸ್ ಪಡೆಯದಿದ್ರೆ ಖಾಸಗಿ ಬಸ್‌ಗಳನ್ನು ರಸ್ತೆಗಿಳಿಸಲು ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಜೊತೆ ನಡೆದ ಸಭೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಬಗ್ಗೆ ಪ್ರಸ್ತಾಪಿಸಿದ್ಧಾರೆ. 

ಇನ್‌ಸ್ಪೆಕ್ಟರ್‌ಗೆ ಅಶ್ಲೀಲ ಫೋಟೋ ಕಳುಹಿಸಿ ಮಹಿಳೆಯಿಂದ ಬೆದರಿಕೆ...

Farmers Pertest to Preservation of Cattle Bill top 10 news of December 12 ckm

ಮಹಿಳೆಯೊಬ್ಬರು ಪೊಲೀಸ್‌ ಇನ್‌ಸ್ಪೆಕ್ಟರ್‌ ಮೊಬೈಲ್‌ಗೆ ಅಶ್ಲೀಲ ಫೋಟೋ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

700 ರೈತ ಸಭೆ, 100 ಸುದ್ದಿಗೋಷ್ಠಿ: ಕೃಷಿ ಕಾಯ್ದೆ ಪ್ರಚಾರಕ್ಕೆ ಬಿಜೆಪಿ ಬೃಹತ್‌ ಅಭಿಯಾನ!...

Farmers Pertest to Preservation of Cattle Bill top 10 news of December 12 ckm

ಕೇಂದ್ರ ಸರ್ಕಾರ ಅಂಗೀಕರಿಸಿರುವ 3 ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 3ನೇ ವಾರಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆ ಕುರಿತ ರೈತರ ಅನುಮಾನ ನಿವಾರಿಸಲು ಮತ್ತು ಕಾಯ್ದೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ದೇಶದ 700 ಜಿಲ್ಲೆಗಳಲ್ಲಿ 100 ಪತ್ರಿಕಾಗೋಷ್ಠಿ ಹಾಗೂ 700 ರೈತ ಸಂಪರ್ಕ ಸಭೆ ನಡೆಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ವಿಧೇಯಕ ಅಂಗೀಕಾರಕ್ಕೆ ಅಡ್ಡಿ, ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ'...

Farmers Pertest to Preservation of Cattle Bill top 10 news of December 12 ckm

ವಿಧಾನಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಕ್ಕೆ ಅಡ್ಡಿ ಉಂಟಾದ ಕಾರಣಕ್ಕೆ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ವಿಶ್ವಕಪ್ ಹೀರೋ ಯುವಿಗಿಂದು 39ನೇ ಜನ್ಮದಿನದ ಸಂಭ್ರಮ..!...

Farmers Pertest to Preservation of Cattle Bill top 10 news of December 12 ckm

ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಯುವಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ರಜನೀಕಾಂತ್‌ಗೆ 70: ಮೋದಿ ಸ್ಪೆಷಲ್ ಬರ್ತ್‌ಡೇ ವಿಶ್...

Farmers Pertest to Preservation of Cattle Bill top 10 news of December 12 ckm

ಭಾರತದ ಚಿತ್ರರಂಗದಲ್ಲಿ ಪ್ರಮುಖ ನಟರಲ್ಲೊಬ್ಬರು ರಜನೀಕಾಂತ್. 70ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿರುವ ನಟನಿಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ. ಪೆಟ್ಟಾ ನಟನನ್ನು ಅವರ ಅಭಿಮಾನಿಗಳು ನಟನಾಗಿ ಕಾಣದೆ ದೇವರಾಗಿಯೇ ಕಂಡು ಆರಾಧಿಸುತ್ತಾರೆಂಬುದು ವಿಶೇಷ. ಇದೀಗ 70 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ನಟ.

ಹೊಸ ವರ್ಷಕ್ಕೆ ಮರ್ಸಿಡೀಸ್ ಬೆಂಝ್ E ಕ್ಲಾಸ್ ನಿಮ್ಮ ಆಯ್ಕೆಯ ಕಾರಾಗಲು ಇಲ್ಲಿದೆ 6 ಕಾರಣ!...

Farmers Pertest to Preservation of Cattle Bill top 10 news of December 12 ckm

ಆರಾಮದಾಯಕ ಪ್ರಯಾಣ, ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ತಂತ್ರಜ್ಞಾನ, ಕಾರ್ ಕೆನೆಕ್ಟ್ ಸೇರಿದಂತೆ ಅತೀ ಹೆಚ್ಚು ಫೀಚರ್ಸ್ ಒಳಗೊಂಡ ಮರ್ಸಿಡೀಸ್ ಬೆಂಝ್ ಕಾರು ಇದೀಗ ವಿಶೇಷ ಆಫರ್ ಘೋಷಿಸಿದೆ. ಹೊಸ ಆಫರ್‌ನೊಂದಿಗೆ 2021ರ ಹೊಸ ವರ್ಷವನ್ನು ಮರ್ಸಿಡೀಸ್ ಬೆಂಝ್ ಕಾರಿನೊಂದಿಗೆ ಸಂಭ್ರಮಿಸಲು ಇಲ್ಲಿವೆ 6 ಪ್ರಮುಖ ಕಾರಣಗಳು.

ಬೇಜವಾಬ್ದಾರಿ ಸವದಿ ಮೇಲೆ ಸಿಎಂ ಗರಂ, ಫುಲ್ ಕ್ಲಾಸ್..!...

Farmers Pertest to Preservation of Cattle Bill top 10 news of December 12 ckm

ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದಾರೆ.

Latest Videos
Follow Us:
Download App:
  • android
  • ios