ವಿಶ್ವಕಪ್ ಹೀರೋ ಯುವಿಗಿಂದು 39ನೇ ಜನ್ಮದಿನದ ಸಂಭ್ರಮ..!

ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಯುವಿ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Former Cricketer Yuvraj Singh Birthday special Wishes Pour In On Social Media kvn

ಬೆಂಗಳೂರು(ಡಿ.12): ಸಿಕ್ಸರ್ ಕಿಂಗ್, ವಿಶ್ವಕಪ್ ಹೀರೋ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಯುವಿ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಸಹಪಾಠಿಗಳಾದ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ ಸೇರಿದಂತೆ ಹಲವು ಮಂದಿ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ.

03 ಅಕ್ಟೋಬರ್ 2000 ದಲ್ಲಿ ಕೀನ್ಯಾ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ಬ್ಯಾಟ್ಸ್‌ಮನ್‌, ಬೌಲರ್‌ ಹಾಗೆಯೇ ಮಿಂಚಿನ ಕ್ಷೇತ್ರರಕ್ಷಕನಾಗಿ ಹಲವಾರ ಸ್ಮರಣೀಯ ಕ್ಷಣಗಳನ್ನು ಯುವಿ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ 2007ರಲ್ಲಿ ನಡೆದ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಕ್ಸರ್ ಬಾರಿಸಿದ್ದು ಯಾರು ಮರೆಯಲು ಸಾಧ್ಯ ಹೇಳಿ. 

ರೈತರ ಪ್ರತಿಭಟನೆ: ತಂದೆ ಯೋಗರಾಜ್‌ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಯುವರಾಜ್ ಸಿಂಗ್..!

ಇನ್ನು 2011ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್ ಗೆಲುವಿನಲ್ಲೂ ಯುವಿ ಮಹತ್ವದ ಪಾತ್ರ ನಿಭಾಯಿಸಿದ್ದರು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವಿ 362 ರನ್ ಹಾಗೂ ಪ್ರಮುಖ 15 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯ ಸ್ಟಾರ್ ಆಟಗಾರನಾಗಿ ಯುವಿ ಹೊರಹೊಮ್ಮಿದ್ದರು. ಅಲ್ಲದೇ ಏಕದಿನ ವಿಶ್ವಕಪ್ ಟೂರ್ನಿಯ ಸರಣಿಶ್ರೇಷ್ಟ ಆಟಗಾರನಾಗಿ ಯುವರಾಜ್ ಸಿಂಗ್ ಹೊರಹೊಮ್ಮಿದ್ದರು.

ಭಾರತ ಪರ ಯುವರಾಜ್ ಸಿಂಗ್ ಒಟ್ಟು 40 ಟೆಸ್ಟ್, 304 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 1900, 8701 ಹಾಗೂ 1177 ರನ್ ಚಚ್ಚಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಒಟ್ಟಾರೆ 159 ವಿಕೆಟ್ ಕಬಳಿಸುವ ಮೂಲಕ ಯುವಿ ತಂಡಕ್ಕೆ ಆಸರೆಯಾಗಿದ್ದರು.

ವಿನೂತನ ಟ್ವೀಟ್‌ಗಳಿಗೆ ಹೆಸರಾದ ವಿರೇಂದ್ರ ಸೆಹ್ವಾಗ್ ಮತ್ತೊಮ್ಮೆ ಯುವಿ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭ ಕೋರಿದ್ದಾರೆ. ಸೆಹ್ವಾಗ್ ಸೇರಿದಂತೆ ಮತ್ತೆ ಯಾರೆಲ್ಲಾ ಯುವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Latest Videos
Follow Us:
Download App:
  • android
  • ios