ಯಾಲಕ್ಕಿ ನಾಡು ಹಾವೇರಿಯ ಅನ್ನದಾತ ಮತ್ತೆ ಸಂಕಷ್ಟಕ್ಕೀಡಾಗಿದ್ದಾನೆ. ಸತತ 3 ವರ್ಷಗಳಿಂದ ಬರದ ಬೆಂಕಿಯಲ್ಲಿ ಬೆಂದು ಹೋಗಿರೋ ರೈತನ ಮೇಲೆ ಈ ವರ್ಷವೂ ಮಳೆರಾಯ ಮುನಿಸಿಕೊಂಡಿದ್ದಾನೆ. ಜಮೀನಿನಲ್ಲಿ ಬಿತ್ತಿದ ಬೀಜ ಮೊಳೆಕೆ ಒಡೆಯದೆ ಕಮರಿ ಹೋಗಿದ್ದು ಮರುಬಿತ್ತನೆಗೆ ರೈತ ಸಜ್ಜಾಗಿದ್ದಾನೆ.
ಹಾವೇರಿ(ಜು.08): ಯಾಲಕ್ಕಿ ನಾಡು ಹಾವೇರಿಯ ಅನ್ನದಾತ ಮತ್ತೆ ಸಂಕಷ್ಟಕ್ಕೀಡಾಗಿದ್ದಾನೆ. ಸತತ 3 ವರ್ಷಗಳಿಂದ ಬರದ ಬೆಂಕಿಯಲ್ಲಿ ಬೆಂದು ಹೋಗಿರೋ ರೈತನ ಮೇಲೆ ಈ ವರ್ಷವೂ ಮಳೆರಾಯ ಮುನಿಸಿಕೊಂಡಿದ್ದಾನೆ. ಜಮೀನಿನಲ್ಲಿ ಬಿತ್ತಿದ ಬೀಜ ಮೊಳೆಕೆ ಒಡೆಯದೆ ಕಮರಿ ಹೋಗಿದ್ದು ಮರುಬಿತ್ತನೆಗೆ ರೈತ ಸಜ್ಜಾಗಿದ್ದಾನೆ.
ಹಾವೇರಿ ಜಿಲ್ಲೆಯ ರೈತರ ಬಾಳಲ್ಲಿ ವರುಣ ಕಣ್ಣಾಮುಚ್ಚಾಲೆ ಆಡುತ್ತಿದ್ದಾನೆ. ಈ ವರ್ಷದ ಮುಂಗಾರು ಆರಂಭದಲ್ಲಿ ಕೊಂಚ ಆರ್ಭಟಿಸಿ, ಉತ್ತಮ ಮಳೆಯಾಗುವ ಭರವಸೆ ಮೂಡಿಸಿತ್ತು. ಆದರೆ, ಬೀಜ ಬಿತ್ತಿದ ಬಳಿಕ ವರುಣ ನಾಪತ್ತೆಯಾಗಿದ್ದಾನೆ. ಭೂಮಿ ಬರಿದಾಗಿದೆ, ಮಳೆಯ ಇಲ್ಲದೆ ಬಿತ್ತಿದ ಬೀಜ ಸರಿಯಾಗಿ ಮೊಳಕೆ ಸಹ ಒಡೆದಿಲ್ಲಾ.
ಮಳೆಯ ಕೊರತೆಯಿಂದ ಕಂಗಾಲಾದ ರೈತ ಈಗ ಮರು ಬಿತ್ತನೆಗೆ ಮುಂದಾಗಿದ್ದಾನೆ. ಈಗ ಎರಡನೆ ಭಾರಿ ಬೀಜ-ಗೊಬ್ಬರ ತರುವುದು ಕಷ್ಠವಾಗಿದೆ. ಆದರೂ ದೃತಿಗೆಡದ ರೈತರು ದೇವರ ಮೇಲೆ ಭಾರ ಹಾಕಿ ಮರು ಬಿತ್ತನೆ ಪ್ರಾರಂಭಿಸಿದ್ದಾರೆ.
ಇನ್ನು ಮಳೆಗಾಗಿ ಜಿಲ್ಲೆಯಲ್ಲಿ ಕತ್ತೆ ಮೆರವಣಿಗೆ, ಮಕ್ಕಳ ಬೆತ್ತಲೆ ಮೆರವಣಿಗೆ, ಗುರ್ಜಿಪೂಜೆ ಹೀಗೆ ನಾನಾ ಪೂಜಾ ಕೈಂಕರ್ಯಗಳು ನಡೆಯುತ್ತಲೇ ಇದೆ. ಈಗ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದು ಎರಡನೆ ಭಾರಿ ಬಿತ್ತನೆಗೆ ಜಿಲ್ಲಾಡಳಿತ ಸಮರ್ಪಕ ಬೀಜಗೊಬ್ಬರ ಒದಗಿಸಲು ಸಿದ್ದತೆ ಮಾಡಿಕೊಂಡಿದೆ.
ಸತತ ಬರಗಾಲವನ್ನು ಕಂಡ ರೈತರಿಗೆ ಒಮ್ಮೆ ಬಿತ್ತನೆ ಮಾಡುವುದೇ ಕಷ್ಠ, ಅಂತದ್ರಲ್ಲಿ ಎರಡನೇ ಭಾರಿ ಬಿತ್ತನೆ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಲಾದರೂ ವರುಣ ಕೃಪೆ ತೋರಿ ಅನ್ನದಾತನ ಕೈ ಹಿಡಿಯಲಿ ಎಂಬುದೇ ನಮ್ಮ ಆಶಯ.
