Asianet Suvarna News Asianet Suvarna News

ಈರುಳ್ಳಿ ಬೆಲೆ ಕುಸಿತ: ಬಂಪರ್ ಬೆಳೆ ತೆಗೆದ ರೈತನ ಕಣ್ಣಲ್ಲಿ ನೀರು!

Farmers Are In Tension Onion Price Decreased

ಬೆಂಗಳೂರು(ಸೆ.24): ಕಳೆದ ಬಾರಿ ಬಂಪರ್ ಬೆಳೆಯಿಂದಾಗಿ ರೈತರಿಗೆ ಯತ್ತೇಚ್ಚ ಲಾಭ ತಂದುಕೊಟ್ಟಿದ್ದ ಈರುಳ್ಳಿ ಈ ಬಾರಿ ಕಣ್ಣೀರು ತರಿಸಿದೆ. ಈ ಬಾರಿ ಈರುಳ್ಳಿ ಧಾರಣೆ ಕೆ.ಜಿಗೆ 2 ರಿಂದ 3 ರೂಪಾಯಿಗೆ ಕುಸಿತ ಕಂಡಿರುವುದು ಬೆಳೆಗಾರರನ್ನು ಕಂಲಾಗಿಸಿದೆ. ಸಾಲ ಸೋಲ ಮಾಡಿ ಈರುಳ್ಳಿ ಬೆಳೆದ ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ

ಬಿರು ಬಿಸಿಲಲ್ಲಿ ಈರುಳ್ಳಿ ಕೀಳ್ತಿರೋ ಈ ರೈತರ ಮನದಲ್ಲಿ ಈಗ ಮಂದಹಾಸ ಇಲ್ಲ. ಯಾಕೆಂದರೆ, ಕಳೆದ ಬಾರಿಯ ಬಂಪರ್ ಬೆಳೆ ಕಂಡು ಈ ಬಾರಿ ಕಾಫಿನಾಡು ಚಿಕ್ಕಮಗಳೂರಿನ ರೈತರು ಯತ್ತೇಚ್ಚವಾಗಿ ಈರುಳ್ಳಿ ಬೆಳೆದಿದ್ದಾರೆ. ಆದ್ರೆ, ಈ ವರ್ಷ ವರುಣನ ಕಣ್ಣಾಮುಚ್ಚಾಲೆ ಆಟದಿಂದ ಈರುಳ್ಳಿ ಸಂಪೂರ್ಣ ಸುಟ್ಟುಹೋಗಿತ್ತು. ಆದ್ರೂ ಕೊನೆಗೆ ಅಲ್ಪಸ್ವಲ್ಪ ಬೆಳೆ ರೈತರ ಕೈ ಸೇರಿದೆ. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ

ಕಣ್ಣೀರುಳ್ಳಿ

ಕಳೆದ ವರ್ಷ ಕೆ.ಜಿ ಈರುಳ್ಳಿ ಗೆ 35-40 ರೂಪಾಯಿ ಇತ್ತು. ಆದರೆ ಈ ಬಾರಿ ಅನ್ನದಾತರಿಗೆ ಭಾರೀ ಹೊಡೆತ ನೀಡಿದ್ದು ಈರುಳ್ಳಿ ಬೆಲೆ ದಿಢೀರ್  ಅಂತ  2 ರಿಂದ 4 ರೂಪಾಯಿಗೆ ಕುಸಿದಿದೆ.

ಅತ್ತ ಬಾಗಲಕೋಟೆ ಜಿಲ್ಲೆಯ ರೈತರದ್ದೂ ಕೂಡ ಇದೇ ಪರಿಸ್ಥಿತಿ. ಜಿಲ್ಲೆಯ ಹುನಗುಂದ, ಬಾದಾಮಿ, ಬೀಳಗಿ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯನ್ನ ಬೆಳೆಯಲಾಗಿದೆ. ಈರುಳ್ಳಿ ಬೆಳೆಯೇನೋ ಚೆನ್ನಾಗಿ ಬಂದಿದೆ. ಆದ್ರೆ ಅದಕ್ಕೆ ಸಿಕ್ಕಿರೋ ಬೆಂಬಲ ಬೆಲೆ ನೋಡಿದ ರೈತರು ಕಣ್ಣೀರು ಹಾಕ್ತಿದ್ದಾರೆ.

ಒಟ್ಟಾರೆ ಬೆಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ ಎಂಬಂತಾಗಿದೆ ಈರುಳ್ಳಿ ಬೆಳೆದ ರೈತರ ಸ್ಥಿತಿ. ಜನಪ್ರತಿನಿಧಿಗಳು ಈರುಳ್ಳಿ ಬೆಳೆದಿರುವ ರೈತರ ಗೋಳನ್ನು ಕೇಳಿ  ಸರ್ಕಾರದ ಗಮನಕ್ಕೆ ತಂದು ಬೆಂಬಲ ಬೆಲೆ ಸಿಗುವಂತೆ ಮಾಡಿ ರೈತರ ಕಣ್ಣೀರು ಒರೆಸಬೇಕಿದೆ

 

Latest Videos
Follow Us:
Download App:
  • android
  • ios