ಈ ಬಾರಿ ಚೆನ್ನಾಗಿ ಮಳೆಯಾಗಿದ್ದರಿಂದ ಬಂಪರ್​​ ಈರುಳ್ಳಿ ಬೆಳೆಯುವ ಕನಸನ್ನ ರೈತರು ಹೊಂದಿದ್ದರು. ಆದರೆ ಮಳೆರಾಯ ಮಾತ್ರ ಈ ಬಾರಿ ರೈತರ ಕಣ್ಣಲ್ಲಿ ನೀರು ತರಿಸಿದ್ದಾನೆ.

ಗದಗ(ಅ.04): ಈ ಬಾರಿ ಚೆನ್ನಾಗಿ ಮಳೆಯಾಗಿದ್ದರಿಂದ ಬಂಪರ್​​ ಈರುಳ್ಳಿ ಬೆಳೆಯುವ ಕನಸನ್ನ ರೈತರು ಹೊಂದಿದ್ದರು. ಆದರೆ ಮಳೆರಾಯ ಮಾತ್ರ ಈ ಬಾರಿ ರೈತರ ಕಣ್ಣಲ್ಲಿ ನೀರು ತರಿಸಿದ್ದಾನೆ.

ಗದಗ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಾಗಿ ಈರುಳ್ಳಿಯನ್ನು ಬೆಳೆಯಲಾಗಿತ್ತು. ಬೆಳೆ ಕೂಡಾ ಚೆನ್ನಾಗಿ ಬಂದಿತ್ತು. ಆದರೆ ಈರುಳ್ಳಿ ಕೈಗೆ ಬರೊ ಮೊದಲೆ ಹಿಂಗಾರು ಮಳೆ ಅಬ್ಬರಕ್ಕೆ ಸಿಕ್ಕು ಮಣ್ಣು ಪಾಲಾಗಿದೆ. ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ರೈತರ ಬದುಕು ಬೀದಿಗೆ ಬೀಳೋ ಆತಂಕ ಎದುರಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಬ್ಯಾಂಕ್ ಸಾಲ ತೀರಿಸಲಾಗದೆ ಅನ್ನದಾತ ಒದ್ದಾಡುತ್ತಿದ್ದಾನೆ.

ಮುಂಡರಗಿ ತಾಲೂಕಿನ ಹಿರೇವಡಟ್ಟಿ, ಡಂಬಳ, ಕದಂಪೂರ, ಜಂತ್ಲಿ ಶಿರೂರ ಸೇರಿದಂತೆ ಜಿಲ್ಲೆಯ ರೋಣ, ನರಗುಂದ, ಶಿರಹಟ್ಟಿ, ಗದಗ ತಾಲೂಕಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆದಿರುವ ರೈತರಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಇಷ್ಟಾದ್ರು ಯಾವೊಬ್ಬ ಕೃಷಿ ಅಧಿಕಾರಿಯು ನಮ್ಮ ಗೊಳು ಕೇಳಲು ಬಂದಿಲ್ಲ ಅಂತಾ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.