ಹಾವೇರಿ (ಫೆ.17): ಸಾಲದ ಹೊರೆಯಿಂದ ಮನನೊಂದ  ರೈತನೊಬ್ಬ ಟ್ರಾನ್ಸ್ ಫಾರ್ಮರ್ ಹತ್ತಿ  ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ  ಘಟನೆ ಇಲ್ಲಿನ  ಶಿರಗೋಡ ಗ್ರಾಮದಲ್ಲಿ ನಡೆದಿದೆ.   

ಹಾವೇರಿ (ಫೆ.17): ಸಾಲದ ಹೊರೆಯಿಂದ ಮನನೊಂದ ರೈತನೊಬ್ಬ ಟ್ರಾನ್ಸ್ ಫಾರ್ಮರ್ ಹತ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಶಿರಗೋಡ ಗ್ರಾಮದಲ್ಲಿ ನಡೆದಿದೆ.

ಬೆಳೆಗೆ ನೀರಿಲ್ಲದೆ ಒಣಗಿದ ಬೆಳೆಯಿಂದ ನೊಂದು ಹೊಲದಲ್ಲಿದ್ದ ವಿದ್ಯುತ್ ಟ್ರಾನ್ಸಪಮ೯ರ್ ಹಿಡಿದು ರೈತ ಸಾಬ್ ಅರಿಶಿಣಗುಪ್ಪಿ ಸಾವಿಗೆ ಶರಣಾಗಿದ್ದಾನೆ. ತನ್ನ 4 ಎಕರೆಯ ಜಮೀನಿನಲ್ಲಿ ಬತ್ತ ಬೆಳೆಯಲು 3 ಲಕ್ಷ ಬ್ಯಾಂಕ್​ ಮತ್ತು ಕೈಗಡ ಸಾಲಮಾಡಿದ್ದ. ಸರಿಯಾಗಿ ಬೆಳೆ ಬರದ ಹಿನ್ನೆಲೆ ಸಾವಿಗೆ ಶರಣಾಗಿದ್ದಾನೆ. 

ಹಾನಗಲ್​ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ​ ದಾಖಲಾಗಿದೆ.