ಮಂಡ್ಯ(ಸೆ.10): ಹೇಮಾವತಿ ನಾಲೆಯಿಂದ ನೀರು ಬಿಡದ ಹಿನ್ನೆಲೆಯಲ್ಲಿ ವಿಷ ಕುಡಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಲಿಂಗೇಗೌಡ ಮೃತ ರೈತ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಅರೆಬೊಪ್ಪನಹಳ್ಳಿಯಲ್ಲಿ ಘಟನೆ ನಡೆದಿದ್ದು, 2 ಎಕರೆ ಗದ್ದೆಯಲ್ಲಿ ನಾಟಿ ಮಾಡಲು ಸಿದ್ಧತೆ ನಡೆಸಿದ್ದ ಶಿವಲಿಂಗೇಗೌಡ ನಾಟಿ ಮಾಡಲು ನೀರಿಲ್ಲದ ಕಾರಣ ಮನನೊಂದು ತಮ್ಮ ಜಮೀನಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.