ರೈತ ನಾಯಕ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ(69) ನಿಧನ
ಮಂಡ್ಯ: ರೈತಸಂಘ ನಾಯಕ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ. ಪುಟ್ಟಣ್ಣಯ್ಯ 1983 ರಿಂದಲೂ ರಾಜ್ಯ ರೈತಸಂಘದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಪುಟ್ಟಣ್ಣಯ್ಯ ನಿಧನದಿಂದಾಗಿ ರೈತ ಹೋರಾಟದ ಕೊನೆಯ ಕೊಂಡಿ ಕಳಚಿದಂತಾಗಿದೆ.
ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬ್ಬಡಿ ಪಂದ್ಯ ವೀಕ್ಷಣೆ ವೇಳೆ ಎದೆ ನೋವಿನಿಂದ ಪುಟ್ಟಣ್ಣಯ್ಯ ಕುಸಿದು ಬಿದ್ದಿದ್ದಾರೆ.ಕೂಡಲೇ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ಪುಟ್ಟಣ್ಣಯ್ಯ ಮೃತಪಟ್ಟಿದ್ದಾರೆ.
ಪುಟ್ಟಣ್ಣಯ್ಯ ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಗ್ರಾಮದ ಶ್ರೀಕಂಠೇಗೌಡ-ಶಾರದಮ್ಮ ದಂಪತಿ ಪುತ್ರ.
1994 ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ, ಪುಟ್ಟಣ್ಣಯ್ಯ 2013ರಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧಿಸಿ 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.ರೈತರ ಹಿತಾಸಕ್ತಿ ಕಾಪಾಡಲು, ಕಾವೇರಿ ನದಿ ನೀರು ವಿಚಾರದಲ್ಲಿ ಪುಟ್ಟಣ್ಣಯ್ಯ ನಿರಂತರ ಹೋರಾಟ ಮಾಡಿದ್ದರು.
ಸ್ವಗ್ರಾಮ ಕ್ಯಾತನಹಳ್ಳಿಗೆ ಆ್ಯಂಬುಲೆನ್ಸ್ ಮೂಲಕ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ:
ರೈತನಾಯಕ ಪುಟ್ಠಣ್ಣಯ್ಯ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದಾರೆ.
ಸಂಸದ ರಾಜೀವ್ ಚಂದ್ರಶೇಖರ್ ಸಂತಾಪ:
