ಮಳೆಗಾಗಿ ಕತ್ತೆ, ಕಪ್ಪೆಗಳ ಮದುವೆ ಮಾಡುವುದನ್ನು ಕೇಳಿದ್ದೀರಿ. ಆದರೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಸಲಾಪುರದ ರೈತನೋರ್ವ ಗಣೇಶ ಮೂರ್ತಿಯನ್ನು ಹೂಳುವ ಮೂಲಕ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಬೆಳಗಾವಿ: ಮಳೆಗಾಗಿ ಕತ್ತೆ, ಕಪ್ಪೆಗಳ ಮದುವೆ ಮಾಡುವುದನ್ನು ಕೇಳಿದ್ದೀರಿ. ಆದರೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಸಲಾಪುರದ ರೈತನೋರ್ವ ಗಣೇಶ ಮೂರ್ತಿಯನ್ನು ಹೂಳುವ ಮೂಲಕ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ರೈತ ಶಿವಗೌಡ ಪಾಟೀಲ ಗಣೇಶೋತ್ಸವದ ವೇಳೆ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಮೂರ್ತಿಯನ್ನು ತನ್ನ ಜಮೀನಿನಲ್ಲಿ ಹೂತು ಮಳೆಗಾಗಿ ಮೊರೆ ಇಟ್ಟಿದ್ದಾರೆ. ಶಿವಗೌಡ ಅವರು ತಮ್ಮ ಮನೆಯಲ್ಲಿ ಪ್ರತಿವರ್ಷ ಗಣೇಶ ಚತುರ್ಥಿ ವೇಳೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ.
ಈ ವರ್ಷ ಪ್ರತಿಷ್ಠಾಪನೆ ಮಾಡುವ ವೇಳೆಯೇ ವಿಗ್ರಹ ವಿಸರ್ಜನೆ ಮಾಡುವ ವೇಳೆಗೆ ಮಳೆ ಬಾರದಿದ್ದರೆ, ಹೂಳುವುದಾಗಿ ಹೇಳಿದ್ದರು. ಆದರೆ ಮಳೆ ಬಾರಲೇ ಇಲ್ಲ. ಕೊನೆಗೂ ಬತ್ತಿ ಬರಿದಾದ ಬಾವಿಗಳಿಗೆ ಗಣೇಶ ಮೂರ್ತಿಯನ್ನು ಇಡುವ ಬದಲು ತಮ್ಮ ಹೊಲದಲ್ಲೇ ಸಂಪ್ರದಾಯಕ್ಕೆ ವಿರುದ್ಧವಾಗಿ ಹೂಳುವ ಮೂಲಕ ಮಳೆಗಾಗಿ ಪ್ರಾರ್ಥಿಸಿದ್ದಾರೆ.
