ಬೆಂಗಳೂರು[ಅ.03]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರು ತಮ್ಮ ರಕ್ತದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ರಾಯಚೂರು ಜಿಲ್ಲೆಯ ಯರಮರಸ್‌ನ ಎಂ.ಡಿ. ಅಮಾನ್‌ ಯರಮರಸ್‌ ಎಂಬುವರು ಸಿದ್ದರಾಮಯ್ಯ ಅವರ ಅಭಿಮಾನಿ. ಸಿದ್ದರಾಮಯ್ಯ ಮಂಗಳವಾರ ರಾಯಚೂರಿಗೆ ಭೇಟಿ ನೀಡಿದಾಗ ಅಭಿಮಾನಿಯೊಬ್ಬರು ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಫೋಟೋದಲ್ಲಿ ‘ನನ್ನ ರಕ್ತದಿಂದ ಸಿದ್ದರಾಮಯ್ಯನವರ ಭಾವಚಿತ್ರವನ್ನು ಚಿತ್ರಿಸಿ ಕೊಡುಗೆಯಾಗಿ ಸಮರ್ಪಿಸುತ್ತಿದ್ದೇನೆ. ಇಂತಿ ನಿಮ್ಮ ಅಭಿಮಾನಿ ಎಂ.ಡಿ. ಅಮಾನ್‌ ಯರಮರಸ್‌. (ವಾರ್ಡ್‌ ನಂ. 33) ರಾಯಚೂರು’ ಎಂದು ಬರೆದಿದ್ದಾರೆ.