Asianet Suvarna News Asianet Suvarna News

’ಮಂಡ್ಯದ ಗಂಡು’ ಅಂಬಿಗೆ ಮುದ್ದೆ- ಕೋಳಿ ಸಾರು ತಂದ ಅಭಿಮಾನಿ!

ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಮಂಡ್ಯದಿಂದ ಆಗಮಿಸಿದ್ಧ ಅಭಿಮಾನಿಯೊಬ್ಬ ಅಂಬಿಗೆ ಎರಡು ರಾಗಿ ಮುದ್ದೆ ಹಾಗೂ ನಾಟಿ ಕೋಳಿ ಸಾರು ತೆಗೆದುಕೊಂಡು ಬಂದಿದ್ದ! 

Fan brought ragi mudde chicken curry for Ambareesh
Author
Bangalore, First Published Nov 26, 2018, 8:27 AM IST
  • Facebook
  • Twitter
  • Whatsapp

ಬೆಂಗಳೂರು[ನ.26]: ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ಅಂತಿಮ ದರ್ಶನಕ್ಕೆ ಮಂಡ್ಯದಿಂದ ಆಗಮಿಸಿದ್ಧ ಅಭಿಮಾನಿಯೊಬ್ಬ ಅಂಬಿಗೆ ಎರಡು ರಾಗಿ ಮುದ್ದೆ ಹಾಗೂ ನಾಟಿ ಕೋಳಿ ಸಾರು ತೆಗೆದುಕೊಂಡು ಬಂದಿದ್ದ!

ಇದನ್ನೂ ಓದಿ: ಮಾಲೀಕನಿಲ್ಲದೆ ಕಣ್ಣೀರಿಡುತ್ತಿದೆ ಅಂಬಿಯ ಸಾಕುನಾಯಿ 'ಕನ್ವರ್'!

ಶನಿವಾರ ರಾತ್ರಿ ನಿಧನರಾದ ಅಂಬರೀಷ್‌ ಅವರ ಅಂತಿಮ ದರ್ಶನಕ್ಕೆ ಭಾನುವಾರ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಂಬರೀಶ್‌ಗೆ ಚಿಕನ್‌ ಹಾಗೂ ನಾಟಿ ಕೋಳಿ ಸಾರು ತುಂಬಾ ಇಷ್ಟ ಎಂಬ ಕಾರ​ಣಕ್ಕೆ ಅಂತಿಮ ದರ್ಶನಕ್ಕೆ ನಾಟಿ ಕೋಳಿ ಸಾರು ಮತ್ತು ಮುದ್ದೆ ಸಮೇತ ಆಗಮಿಸಿದ್ದ. ದರ್ಶನ ಪಡೆದು ಪಾರ್ಥಿವ ಶರೀರದ ಬಳಿ ಮುದ್ದೆ ಮತ್ತು ನಾಟಿ ಕೋಳಿ ಸಾರು ಇಡುವುದಕ್ಕೆ ಮುಂದಾದ. ಆದರೆ, ಪೊಲೀಸರು ಅವಕಾಶ ನೀಡಲಿಲ್ಲ.

ಇದನ್ನೂ ಓದಿ: ನೋ ವೇ... ಚಾನ್ಸೇ ಇಲ್ಲ... ಅಂಬರೀಶ್ ಹೋಗಿಯೇ ಇಲ್ಲ!

ಬೇಸರಗೊಂಡ ಅಭಿಮಾನಿ ಪ್ರೀತಿಯಿಂದ ತೆಗೆದುಕೊಂಡು ಬಂದಿದ್ದ ಮುದ್ದೆ ಮತ್ತು ಕೋಳಿ ಸಾರನ್ನು ವಾಪಸ್‌ ತೆಗೆದುಕೊಂಡು ಹೋಗಬೇಕಾಯಿತು.

Follow Us:
Download App:
  • android
  • ios