ಕಟೀಲು ಮೇಳದ ಕಲಾವಿದ ಗಂಗಯ್ಯ ಶೆಟ್ಟಿ ಕಟೀಲು ಬಳಿಯ ಎಕ್ಕಾರಿನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಅರುಣಾಸುರ ಪಾತ್ರ ಧರಿಸಿದ್ದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಪ್ರದರ್ಶನ ನೀಡುತಯ್ತಿದ್ದಂತೆಯೇ ಕುಸಿದು ಬಿದ್ದಿದ್ದರು. ತಕ್ಷಣವೇ ಸಮೀಪದ ಕಿನ್ನಿಗೋಳಿ ಆಸ್ಪತ್ರೆಗೆ ಸಾಗಿಸಿದರೂ, ಬದುಕಿಸಲಾಗಲಿಲ್ಲ.

ಮಂಗಳೂರು(ಮಾ.23): ಕಟೀಲು ಮೇಳದ ಕಲಾವಿದ ಗಂಗಯ್ಯ ಶೆಟ್ಟಿ ಕಟೀಲು ಬಳಿಯ ಎಕ್ಕಾರಿನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಅರುಣಾಸುರ ಪಾತ್ರ ಧರಿಸಿದ್ದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಪ್ರದರ್ಶನ ನೀಡುತಯ್ತಿದ್ದಂತೆಯೇ ಕುಸಿದು ಬಿದ್ದಿದ್ದರು. ತಕ್ಷಣವೇ ಸಮೀಪದ ಕಿನ್ನಿಗೋಳಿ ಆಸ್ಪತ್ರೆಗೆ ಸಾಗಿಸಿದರೂ, ಬದುಕಿಸಲಾಗಲಿಲ್ಲ.

 ಸುಮಾರು 40 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಖ್ಯಾತ ಕಲಾವಿದ ಮಹಿಷಾಸುರ ಪಾತ್ರಧಾರಿಯಾಗಿ ಮಿಂಚಿದ್ದವರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಇತ್ತೀಚೆಗೆ ದೇಹಕ್ಕೆ ಭಾರವೆನಿಸುವ ವೇಷ ಧರಿಸುವ ಪಾತ್ರ ಮಾಡುತ್ತಿರಲಿಲ್ಲ.