ಸಾಮಾನ್ಯವಾಗಿ ಒಬ್ಬೊಬ್ಬರೇ ಕಾಣಿಸಿಕೊಳ್ಳುವ ಇವರು ಸಂಸಾರ ಸಮೇತ ಆಗಮಿಸಿದ್ದರು.

ಮಡಿಕೇರಿ (ಜ.18): ಕೊಡಗಿನ ಪೊನ್ನಂಪೇಟೆಯ ಮನೆಯೊಂದಕ್ಕೆ ವಿಶೇಷ ಅತಿಥಿಗಳು ಆಗಮಿಸಿದ್ದವು.

ಸಾಮಾನ್ಯವಾಗಿ ಒಬ್ಬೊಬ್ಬರೇ ಕಾಣಿಸಿಕೊಳ್ಳುವ ಇವರು ಸಂಸಾರ ಸಮೇತ ಆಗಮಿಸಿದ್ದರು. ಅಷಕ್ಕೂ ಇಲ್ಲಿ ಕಾಣಿಸಿಕೊಂಡಿದ್ದು ಹಾವಿನ ಸಂಸಾರ.

ಪೊನ್ನಂಪೇಟೆಯ ಮದನ್ ಮತ್ತು ಮನ್ಮಥ್ ಎಂಬುವವರ ಮನೆಯಲ್ಲಿ ಮೂರು ನಾಗರ ಹಾವುಗಳು ಪ್ರತ್ಯಕ್ಷವಾಗಿದ್ದವು. ಬೆಳಿಗ್ಗಿನ ಹೊತ್ತಿಗೆ ಮನೆಯ ಆವರಣದಲ್ಲಿ ಒಟ್ಟೊಟ್ಟಿಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದವು.

ಅಕ್ಕಪಕ್ಕದ ಮನೆಗಳಿಗೆ ಏಕಾಏಕಿ ಮೂರು ಹಾವುಗಳು ಬಂದಿರುವುದು ಅಚ್ಚರಿ ಮೂಡಿಸಿದೆ. ಬೆಳ್ಳಂಬೆಳಗ್ಗೆ ಹಾವುಗಳನ್ನು ಕಂಡ ಮನೆಯವರು ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿ ಉರಗ ತಜ್ಞರಾದ ನವೀನ್ ಮತ್ತು ಸುನೀಲ್ ಎಂಬುವವರು ಕರೆಸಿ ಹಾವುಗಳನ್ನು ಸೆರೆ ಹಿಡಿದು ನಾಗರಹೊಳೆ ಅರಣ್ಯ ವ್ಯಾಪ್ತಿಗೆ ಒಳಪಡುವ ತಿತಿಮತಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.