ಜಾರ್ಖಂಡ್'ನ ಜಮ್ಷಡ್'ಪುರದ ಬಿ.ಆರ್.ಗುಹಾ ಎಂಬುವವರ ಮನೆಗೆ ಊಹಿಸಲು ಅಸಾಧ್ಯವಾದ ಕರೆಂಟ್ ಬಿಲ್ ಬಂದಿದೆ.

ಜಮ್ಷಡ್'ಪುರ(ಆ.14): ಎರಡೂ ಅಥವಾ ಮೂರು ಕೋಣೆಗಳಿರುವ ಮನೆಗೆ ಅಬ್ಬಬ್ಬ ಎಂದರೆ 2 ಸಾವಿರ ಅತೀ ಹೆಚ್ಚು ಎಂದರೆ 5 ಸಾವಿರ ಬರಬಹುದೇನೊ. ಆದರೆ ಇಲ್ಲೊಂದು 3 ಬೆಡ್ ರೂಂ ಇರುವ ಮನೆಗೆ ಬರೋಬ್ಬರಿ 3800 ಕೋಟಿರೂಪಾಯಿವಿದ್ಯುತ್ ಬಿಲ್ ಬಂದಿದೆ.

ಜಾರ್ಖಂಡ್'ನ ಜಮ್ಷಡ್'ಪುರದ ಬಿ.ಆರ್.ಗುಹಾ ಎಂಬುವವರ ಮನೆಗೆ ಊಹಿಸಲು ಅಸಾಧ್ಯವಾದ ಕರೆಂಟ್ ಬಿಲ್ ಬಂದಿದೆ. ಸಾಮಾನ್ಯ ಮಧ್ಯಮ ವರ್ಗಕ್ಕೆ ಸೇರಿದ ಇವರ ಮನೆಯಲ್ಲಿರುವುದು ಮೂರು ಫ್ಯಾನ್'ಗಳು, ಮೂರು ಟ್ಯೂಬ್'ಲೈಟ್ ಹಾಗೂ ಒಂದು ಟಿವಿ ಮಾತ್ರ. ಇಷ್ಟು ದೊಡ್ಡ ಮೊತ್ತದ ಬಿಲ್ ಬಂದಿರುವುದಕ್ಕೆ ಗುಹಾ ಅವರು ವಿದ್ಯುತ್ ಕಂಪನಿ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.