2015ರ ಫೆಬ್ರವರಿಯಲ್ಲಿ ಫೇಸ್ಬುಕ್'ನಲ್ಲಿ ಪೋಸ್ಟ್ ಹಾಕಿದ ಜಾಕೆಲಿನ್ ಹ್ಯಾಮಂಡ್ ವಿರುದ್ಧ ಡೇವಿನೆ ಡಯಲ್ ಅವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದರು.

ನ್ಯೂಯಾರ್ಕ್(ಏ. 01): ತಮ್ಮ ಫೇಸ್ಬುಕ್'ನಲ್ಲಿ ಸುಳ್ಳು ಆರೋಪವಿರುವ ಪೋಸ್ಟ್ ಹಾಕಿದ ಮಹಿಳೆಯೊಬ್ಬರಿಗೆ ನ್ಯಾಯಾಲಯವು ಭಾರೀ ಮೊತ್ತದ ದಂಡ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಮಾಜಿ ಗೆಳತಿ ವಿರುದ್ಧ ಕೊಲೆ ಆರೋಪ ಹೊರಿಸಿ ಫೇಸ್ಬುಕ್'ನಲ್ಲಿ ಬರೆದುಕೊಂಡಿದ್ದ ಜಾಕೆಲಿನ್ ಹ್ಯಾಮಂಡ್ ಎಂಬಾಕೆಗೆ ನಾರ್ತ್ ಕರೋಲಿನಾದ ಕೋರ್ಟ್'ವೊಂದು 5 ಲಕ್ಷ ಡಾಲರ್ (ಸುಮಾರು 3.2 ಕೋಟಿ ರೂ.) ದಂಡ ವಿಧಿಸಿದೆ.

2015ರ ಫೆಬ್ರವರಿಯಲ್ಲಿ ಫೇಸ್ಬುಕ್'ನಲ್ಲಿ ಪೋಸ್ಟ್ ಹಾಕಿದ ಜಾಕೆಲಿನ್ ಹ್ಯಾಮಂಡ್ ವಿರುದ್ಧ ಡೇವಿನೆ ಡಯಲ್ ಅವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದರು.

"ಸೋಷಿಯಲ್ ಮೀಡಿಯಾದಲ್ಲಿ ಯಾರ ಕಣ್ಣಿಗೂ ಬೀಳದೇ ಇರುವುದರಿಂದ ಏನು ಬೇಕಾದರೂ ಬರೆಯಬಹುದು, ಹೇಳಬಹುದು ಎಂದಂದುಕೊಂಡಿದ್ದಾರೆ. ಹ್ಯಾಮಂಡ್ ಅವರು ಹಲವು ವರ್ಷಗಳ ಕಾಲ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಇದರಿಂದ ನನಗೆ ಬಹಳ ನೋವಾಗಿದೆ" ಎಂದು ಡೇವಿನೆ ಡಯಲ್ ವಿಷಾದಿಸಿದ್ದಾರೆ.

"ಇವತ್ತಿನ ದಿನದಲ್ಲಿ ಜನರು ತಾವಾಡಿದ ಮಾತಿನ ಬೆಲೆ ತಿಳಿದಿರುವುದಿಲ್ಲ. ನೀವು ಮಾತನಾಡಬಹುದು ಎಂದಾಕ್ಷಣ ಮಾತನಾಡಬೇಕು ಎಂದೇನಿಲ್ಲ. ಸುಳ್ಳು ಹೇಳಿಕೆ ಕೊಟ್ಟು ಬೇರೆಯವರ ಮಾನಹರಣ ಮಾಡಿದರೆ ತೊಂದರೆಗೆ ಸಿಕ್ಕಿಬೀಳುತ್ತೀರಿ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ" ಎಂದು ಡೇವಿನೆ ಡಯಲ್ ಅವರ ಪರ ವಕೀಲೆ ಮಿಸ್ಸಿ ಓವೆನ್ ಅಭಿಪ್ರಾಯಪಟ್ಟಿದ್ದಾರೆ.

(ಮಾಹಿತಿ: ಐಎಎನ್'ಎಸ್ ಸುದ್ದಿ ಸಂಸ್ಥೆ)