[ವೈರಲ್‌ ಚೆಕ್‌] ಕಪ್ಪು ಕಲ್ಲು ಧರಿಸಿದರೆ ಸಾವು ಬಾರದು.. ?

First Published 4, Apr 2018, 9:23 AM IST
Faking news Suleman Hakik Stone
Highlights

ಪ್ರತಿಯೊಬ್ಬನಿಗೂ ಸಾವಿನ ಭಯ ಇದ್ದೇ ಇರುತ್ತೆ. ಆದರೆ, ಕಪ್ಪು ಬಣ್ಣದ ಒಂದು ಕಲ್ಲನ್ನು ಧರಿಸುವುದರಿಂದ ಸಾವನ್ನು ದೂರ ಮಾಡಬಹುದು! ಹೌದು. ಇದು ಯಾವುದೇ ಪುರಾಣ ಕಾಲದ ಕತೆಯಲ್ಲ.

ಪ್ರತಿಯೊಬ್ಬನಿಗೂ ಸಾವಿನ ಭಯ ಇದ್ದೇ ಇರುತ್ತೆ. ಆದರೆ, ಕಪ್ಪು ಬಣ್ಣದ ಒಂದು ಕಲ್ಲನ್ನು ಧರಿಸುವುದರಿಂದ ಸಾವನ್ನು ದೂರ ಮಾಡಬಹುದು! ಹೌದು. ಇದು ಯಾವುದೇ ಪುರಾಣ ಕಾಲದ ಕತೆಯಲ್ಲ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಸುದ್ದಿ. ‘ಸುಲೇಮಾನಿ ಹಕೀಕ್‌’ ಎಂಬ ಕಲ್ಲು ನಿಮ್ಮ ಕೈಯನ್ನು ಸ್ಪರ್ಶಿಸಿದರೆ ನೀವು ಅಮರರಾಗುತ್ತೀರಿ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ಈ ಸಂದೇಶದಲ್ಲಿ ಹೇಳುವಂತೆ ಕಪ್ಪು ಬಣ್ಣದ ಈ ಕಲ್ಲು ನಿಮ್ಮ ಬಳಿ ಇದ್ದರೆ ನಿಮ್ಮ ದುಃಖ, ಮತ್ತು ನೋವು ದೂರ ಮಾಡುವುದರ ಜೊತೆಗೆ ನಿಮ್ಮ ದೇಹದ ಸುತ್ತ ಸುರಕ್ಷತೆಯ ಒಂದು ಕವಚವನ್ನು ನಿರ್ಮಿಸುತ್ತದೆ.

ಹೀಗಾಗಿ ಸಾವು ನಿಮ್ಮ ಬಳಿ ಸುಳಿಯುವುದೇ ಇಲ್ಲ. ನಿಮ್ಮನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಈ ಮಾತನ್ನು ಸಾಬೀತುಪಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಈ ಕಲ್ಲಿನಿಂದ ಆಗುವ ಚಮತ್ಕಾರಗಳ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಸುಲೇಮಾನಿ ಕಲ್ಲು ಧರಿಸಿದ ವ್ಯಕ್ತಿಗೆ ಗುಂಡು ಹಾರಿಸಿದರೂ ಆತ ಸಾಯುವುದಿಲ್ಲ.

ಕೈ ಮೇಲೆ ಆ್ಯಸಿಡ್‌ ಹಾಕಿದರೂ ಏನೂ ಆಗುವುದಿಲ್ಲ... ಇಂತಹ ಹಲವಾರು ವಿಡಿಯೋಗಳನ್ನು ತೋರಿಸಲಾಗುತ್ತಿದೆ. ಆದರೆ, ಈ ಬಗ್ಗೆ ಭೂವಿಜ್ಞಾನ ತಜ್ಞರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಈ ರೀತಿಯ ಚಮತ್ಕಾರಗಳನ್ನು ಸಾರಾಗಟಾಗಿ ಅಲ್ಲಗಳೆದಿದ್ದಾರೆ. ಹೀಗಾಗಿ ಸುಲೇಮಾನಿ ಹಕೀಕ್‌ ಕಲ್ಲು ನಿಮ್ಮ ಬಳಿ ಇದ್ದರೆ ಅಮರತ್ವ ಪ್ರಾಪ್ತವಾಗುತ್ತದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು.

loader