[ಸುಳ್ಳು ಸುದ್ದಿ] ರಾಹುಲ್ ಕರೆತರಲು 3 ಕಾಂಗ್ರೆಸ್ ನಾಯಕರು ಇಟಲಿಗೆ..

First Published 6, Mar 2018, 10:39 AM IST
Faking News Rahul Gandhi In Italy
Highlights

ಈ ಶಾನ್ಯದ ಮೂರು ರಾಜ್ಯಗಳ ಚುನಾವಣೆ ಫಲಿತಾಂಶ ಏನಾಗುತ್ತದೆಯೋ ಏನೋ ಎಂಬ ಆತಂಕದಲ್ಲಿ ಎಂದಿನಂತೆ ಇಟಲಿಗೆ ಹೋಗಿರುವ ರಾಹುಲ್ ವಾಪಸ್ ಬರುವುದು ಯಾವಾಗ ಎಂಬ ಚಿಂತೆ ಕಾಂಗ್ರೆಸ್ಸಿಗರಿಗೆ ಶುರು ವಾಗಿದೆ.

ನವದೆಹಲಿ : ಈ ಶಾನ್ಯದ ಮೂರು ರಾಜ್ಯಗಳ ಚುನಾವಣೆ ಫಲಿತಾಂಶ ಏನಾಗುತ್ತದೆಯೋ ಏನೋ ಎಂಬ ಆತಂಕದಲ್ಲಿ ಎಂದಿನಂತೆ ಇಟಲಿಗೆ ಹೋಗಿರುವ ರಾಹುಲ್ ವಾಪಸ್ ಬರುವುದು ಯಾವಾಗ ಎಂಬ ಚಿಂತೆ ಕಾಂಗ್ರೆಸ್ಸಿಗರಿಗೆ ಶುರು ವಾಗಿದೆ.

ಹಿಂದೆಲ್ಲ ಅವರು ಉಪಾಧ್ಯಕ್ಷರಾಗಿದ್ದರು. ಆಗ ಸೋನಿಯಾ ಗಾಂಧಿ ದೆಹಲಿಯಲ್ಲೇ ಇದ್ದುಕೊಂಡು ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದ್ದರು. ರಾಹುಲ್ ತಿಂಗಳುಗಟ್ಟಲೆ ವಿದೇಶಕ್ಕೆ ಹೋದರೂ ಏನೂ ಆಗುತ್ತಿ ರಲಿಲ್ಲ.

ಆದರೆ, ಈಗ ರಾಹುಲ್ ಗಾಂಧಿಯೇ ಎಐಸಿಸಿಗೆ ಅಧ್ಯಕ್ಷರು. ಆದರೂ ಅವರು ಬಹಳ ಮುಖ್ಯ ಸಮಯದಲ್ಲಿ ವಿದೇಶಕ್ಕೆ ಹೋಗಿದ್ದಾರೆ. ಇದು ಅವರಿಗೆ ನೆನಪಿದೆಯೋ ಇಲ್ಲವೋ ಎಂಬ ಗೊಂದಲ ಇಲ್ಲಿನ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದ್ದು,ಮೂವರನ್ನು ಇಟಲಿಗೆ ಕಳಿಸಿದ್ದಾರೆ ಎಂದು ಸುಳ್‌ಸುದ್ದಿ ಸಂಸ್ಥೆಗೆ ಗೊತ್ತಾಗಿದೆ. [ಸುಳ್ಳು ಸುದ್ದಿ]

loader