ಲೋಕಸಭೆಯಲ್ಲಿ ಹೊಸದಾದ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಆದೇಶ ನೀಡಿದ್ದಾರೆ. ಆಡಳಿತ ಮತ್ತು ವಿಪಕ್ಷಗಳ ನಡುವೆ ಬ್ಯಾರಿಕೇಡ್ ಹಾಕಲು ಆದೇಶ ನೀಡಿದ್ದಾರೆ. 

ಬೆಂಗಳೂರು : ಹೇಳದೆ ಕೇಳದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಲೋಕಸಭೆ ಕಲಾಪದ ವೇಳೆ ತಮ್ಮತ್ತ ನುಗ್ಗಿ ಬಂದು ಅಪ್ಪಿಕೊಂಡಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ. 

ಕೇವಲ ಜಾಗತಿಕ ನಾಯಕರನ್ನು ಮಾತ್ರ ಅಪ್ಪಿಕೊಳ್ಳುತ್ತಿದ್ದ ಅವರಿಗೆ, ಇನ್ನೊಬ್ಬರು, ಅದೂ ರಾಹುಲ್ ಗಾಂಧಿ, ಅಪ್ಪಿಕೊಂಡಿದ್ದು ಎಳ್ಳಷ್ಟೂ ಹಿಡಿಸಿಲ್ಲ. ಹೀಗಾಗಿ ಅವರು ಲೋಕಸಭೆಯಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಬ್ಯಾರಿಕೇಡ್ ಹಾಕಲು ಸೂಚನೆ ನೀಡಿದ್ದಾರೆ.

ಆಗ ರಾಹುಲ್ ಗಾಂಧಿ ಸೇರಿದಂತೆ ಯಾರೊಬ್ಬರೂ ತಮ್ಮತ್ತ ಬರಲು ಸಾಧ್ಯವಿಲ್ಲ. ಬಿಜೆಪಿಯವರಿಗೆ ಹೇಗಿದ್ದರೂ ತಮ್ಮನ್ನು ಅಪ್ಪಿಕೊಳ್ಳುವಷ್ಟು ಧೈರ್ಯವಿಲ್ಲ ಎಂದು ಮೋದಿ ಯೋಚಿಸಿದ್ದಾರೆಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

[ಸುಳ್ಳು ಸುದ್ದಿ - ಇದು ಕೇವಲ ತಮಾಷೆಗಾಗಿ]