[ಸುಳ್ಳು ಸುದ್ದಿ ] ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋದಾದರೆ ಚುನಾವಣೆ ಮಾಡಲ್ಲ : ಚುನಾವಣಾ ಆಯೋಗ

First Published 5, Mar 2018, 10:53 AM IST
Faking News No Election In Karnataka
Highlights

ಇತ್ತೀಚೆಗೆ ಯಾವ ರಾಜ್ಯದಲ್ಲಿ ಚುನಾವಣೆ ನಡೆಸಿದರೂ ಬಿಜೆಪಿಯೇ ಗೆಲ್ಲುತ್ತಿದೆ. ಅಲ್ಲದೇ ಚುನಾವಣೆಯಲ್ಲಿ ಬಹುಮತ ಗಳಿಸಲು ಆಗದೇ ಇದ್ದರೆ, ಬೆರಳೆಣಿಕೆಯಷ್ಟು ಸೀಟು ಗೆದ್ದರೂ ಇತರ  ಪಕ್ಷಗಳನ್ನು ಬುಟ್ಟಿಗೆ ಹಾಕಿಕೊಂಡು ಬಿಜೆಪಿಯೇ ಸರ್ಕಾರ ರಚಿಸುತ್ತಿದೆ.

ಬೆಂಗಳೂರು : ಇತ್ತೀಚೆಗೆ ಯಾವ ರಾಜ್ಯದಲ್ಲಿ ಚುನಾವಣೆ ನಡೆಸಿದರೂ ಬಿಜೆಪಿಯೇ ಗೆಲ್ಲುತ್ತಿದೆ. ಅಲ್ಲದೇ ಚುನಾವಣೆಯಲ್ಲಿ ಬಹುಮತ ಗಳಿಸಲು ಆಗದೇ ಇದ್ದರೆ, ಬೆರಳೆಣಿಕೆಯಷ್ಟು ಸೀಟು ಗೆದ್ದರೂ ಇತರ  ಪಕ್ಷಗಳನ್ನು ಬುಟ್ಟಿಗೆ ಹಾಕಿಕೊಂಡು ಬಿಜೆಪಿಯೇ ಸರ್ಕಾರ ರಚಿಸುತ್ತಿದೆ.

ಎಲ್ಲಾ ರಾಜ್ಯಗಳಲ್ಲಿ ಈ ರೀತಿ ಆಗುವುದಾದರೆ ಚುನಾವಣೆಯನ್ನೇ ನಡೆಸಬೇಕಾಗಿಲ್ಲ. ರಾಜ್ಯಪಾಲರು ನೇರವಾಗಿ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಬಹುದು.

ಇನ್ನು ಕರ್ನಾಟಕ ದಲ್ಲೂ ನಾವೇ ಗೆಲ್ಲುತ್ತೇವೆ ಎಂದು ಮೋದಿ ಹಾಗೂ ಅಮಿತ್ ಶಾ ಘೋಷಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಹೇಗಿದ್ದರೂ ಬಿಜೆಪಿಯೇ ಗೆಲ್ಲುತ್ತದೆ ಎನ್ನುವುದಾದರೆ ಚುನಾವಣೆ ನಡೆಸಬೇಕಾದ ಅಗತ್ಯವೇ ಇಲ್ಲ. ಚುನಾವಣೆ ಹೆಸರಿನಲ್ಲಿ ನೂರಾರು ಕೋಟಿ ರು. ಹಣ ಖರ್ಚು ಮಾಡುವುದು ಉಳಿಯಲಿದೆ ಎಂದು ಗೊತ್ತಾಗಿದೆ. [ಸುಳ್ಳು ಸುದ್ದಿ]

loader