[ಸುಳ್ಳು ಸುದ್ದಿ] ರವಿಶಂಕರ್ ಪ್ರಸಾದ್ ಬೆದರಿಕೆಗೆ ಹೆದರಿ ಜುಕರ್ ಬರ್ಗ್ ಬಿಜೆಪಿ ಸೇರ್ಪಡೆ

Faking News Mark Zukerberg Join BJP
Highlights

ಅಮೆರಿಕದಲ್ಲಿ ಮಾಡಿದಂತೆ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಕೈಯಾಡಿಸಲು ಪ್ರಯತ್ನಿಸಿದರೆ ನಿಮ್ಮನ್ನು ಖಂಡಿತ ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಬೆದರಿಕೆ ಹಾಕಿದ್ದನ್ನು ಕೇಳಿ ಬೆಚ್ಚಿರುವ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅಂತಿಮವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ವಾಷಿಂಗ್ಟನ್ : ಅಮೆರಿಕದಲ್ಲಿ ಮಾಡಿದಂತೆ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಕೈಯಾಡಿಸಲು ಪ್ರಯತ್ನಿಸಿದರೆ ನಿಮ್ಮನ್ನು ಖಂಡಿತ ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಬೆದರಿಕೆ ಹಾಕಿದ್ದನ್ನು ಕೇಳಿ ಬೆಚ್ಚಿರುವ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅಂತಿಮವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಅಮೆರಿಕದ ಚುನಾವಣೆಯ ವೇಳೆ ಕೇಂಬ್ರಿಜ್ ಅನಾಲಿಟಿಕಾ ಕಂಪನಿಯವರು ಫೇಸ್‌ಬುಕ್‌ನಲ್ಲಿರುವ ಮತದಾರರ ವೈಯಕ್ತಿಕ ಮಾಹಿತಿಯನ್ನು ಕದ್ದು ಡೊನಾಲ್ಡ್ ಟ್ರಂಪ್‌ಗೆ ನೆರವು ನೀಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಂಚಲನ ಮೂಡಿಸಿದೆ. ಅದರ ಬೆನ್ನಲ್ಲೇ ರವಿಶಂಕರ ಪ್ರಸಾದ್ ಅವರು ಜುಕರ್‌ಬರ್ಗ್‌ಗೆ ಎಚ್ಚರಿಕೆ ನೀಡಿ, ಬೇಕಾದರೆ ನಿಮ್ಮನ್ನು ಭಾರತಕ್ಕೂ ಕರೆಸುತ್ತೇವೆ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಜುಕರ್‌ಬರ್ಗ್ ಬಿಜೆಪಿ ಸೇರುವ ನಿರ್ಧಾರಕ್ಕೆ ಬಂದರು ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

loader