ಶಾಂತಿವನದಿಂದ ಸಿದ್ದರಾಮಯ್ಯ ರಾಜಕೀಯಕ್ಕೆ ಮರಳುತ್ತಾರೆ ಎನ್ನುವುದರಲ್ಲೇ ಮತ್ತೊಂದು ಅಚ್ಚರಿ ವೆಳವಣಿಗೆ ..!

First Published 29, Jun 2018, 11:46 AM IST
Faking News Karnataka Political :  Siddaramaiah Surprical Move
Highlights

ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ಫಿಟ್ ಆಗಿರುವ ಸಿದ್ದರಾಮಯ್ಯ ಇನ್ನೇನು ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ ಎನ್ನುವಷ್ಟರಲ್ಲೇ ಅಚ್ಚರಿಯ ಬೆಳವಣಿಗೆ ಯೊಂದು ನಡೆದಿದೆ. 

[ಸುಳ್ಳು ಸುದ್ದಿ]

ಬೆಂಗಳೂರು :  ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ಫಿಟ್ ಆಗಿರುವ ಸಿದ್ದರಾಮಯ್ಯ ಇನ್ನೇನು ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ ಎನ್ನುವಷ್ಟರಲ್ಲೇ ಅಚ್ಚರಿಯ ಬೆಳವಣಿಗೆ ಯೊಂದು ನಡೆದಿದೆ. ಸಿದ್ದರಾಮಯ್ಯ ಅವರಿಗೆ ಒಂದು ತಿಂಗಳು ಹಿಮಾಲಯಕ್ಕೆ ತೆರಳಿ ಧ್ಯಾನ ಮಾಡುವಂತೆ ವೈದ್ಯರು ಹಾಗೂ ಹಿತೈಷಿಗಳು ಸಲಹೆ ನೀಡಿದ್ದಾರೆ. 

ಹೀಗಾಗಿ ಸಿದ್ದಾರಾಮಯ್ಯ ರಾಜಕೀಯ ಜಂಜಾಟವನ್ನು ಮರೆತು ಹಿಮಾಲಯದಲ್ಲಿ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಈ ವೇಳೆ ಯಾವುದೇ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡದಂತೆ ಹಾಗೂ ರಾಜಕೀಯ ವಿಷಯ ಚರ್ಚಿಸದಂತೆಯೂ ಸೂಚಿಸಲಾಗಿದೆ. 

 ಇದರಿಂದ ಸರ್ಕಾರ ಸದ್ಯದ ಮಟ್ಟಿಗೆ ನಿರಾಳವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಖರ್ಚುವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆದರೆ, ಸಿದ್ದರಾಮಯ್ಯ ಅವರು ಇದರಿಂದ ಸಂತುಷ್ಟರಾಗಿಲ್ಲ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

loader