ಹಾಸನದಲ್ಲಿ ಜನರಿಗೆ ವಿಶೇಷ ಸೌಲಭ್ಯ ನೀಡುತ್ತಾ ಬಂದಿರುವ ಸಚಿವ ರೇವಣ್ಣ ಅವರೀಗ ಹಾಸನಕ್ಕೆ ರಾಜ್ಯದ ಸ್ಥಾನಮಾನ ಕಲ್ಪಿಸಲು ಹೊರಟಿದ್ದಾರೆ. 

ಬೆಂಗಳೂರು : ಹಾಸನದಲ್ಲಿ ಜನರಿಗೆ ವಿಶೇಷ ಸೌಲಭ್ಯ ನೀಡುತ್ತಾ ಬಂದಿರುವ ಸಚಿವ ರೇವಣ್ಣ ಅವರೀಗ ಹಾಸನಕ್ಕೆ ರಾಜ್ಯದ ಸ್ಥಾನಮಾನ ಕಲ್ಪಿಸಲು ಹೊರಟಿದ್ದಾರೆ. ಹಾಸನವನ್ನು ನಾನು ಪ್ರತ್ಯೇಕ ರಾಜ್ಯ ಎಂದೇ ಭಾವಿಸಿದ್ದೇನೆ. 

ರಾಜ್ಯದ ಸ್ಥಾನ ನೀಡಿ, ನನ್ನನ್ನು ಸಿಎಂ ಎಂದು ಪರಿಗಣಿಸಬೇಕು ಎಂದು ರೇವಣ್ಣ ಮೈತ್ರಿ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. 

ಆದರೆ, ಸಿಎಂ ಆದಿಯಾಗಿ ಎಲ್ಲರೂ ರೈತರ ಸಾಲ ಮನ್ನಾ ವಿಚಾರದಲ್ಲಿ ಮಗ್ನರಾಗಿರುವುದರಿಂದ ರೇವಣ್ಣ ಅವರ ಅಹವಾಲನ್ನು ಆಲಿಸಲು ಯಾರೂ ಸಿದ್ಧರಾಗಿಲ್ಲ. ಹೀಗಾಗಿ ಹಾಸನಕ್ಕೆ ತಾವೇ ಮುಖ್ಯಮಂತ್ರಿ ಎಂದು ರೇವಣ್ಣ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 

ಸುಳ್ಳು ಸುದ್ದಿ