ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.  

ಬೆಂಗಳೂರು : ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಯಲ್ಲಿ ವಿಶ್ರಾಂತಿ ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನೊಬ್ಬ ರಾಷ್ಟ್ರಮಟ್ಟದ ರಾಜಕಾರಣಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನೇ ನೇತೃತ್ವ ವಹಿಸಿದ್ದೆ. ಕ್ರಿಕೆಟ್‌ನಲ್ಲಿ ದುರ್ಬಲ ತಂಡಗಳ ವಿರುದ್ಧ ನಾಯಕನಿಗೆ ವಿಶ್ರಾಂತಿ ನೀಡುವಂತೆ ನನಗೆ ವಿಶ್ರಾಂತಿಯ ಅಗತ್ಯವಿದೆ.

ಉಪ ಚುನಾವಣೆಗಳಿಗೆಲ್ಲಾ ಮಹತ್ವ ನೀಡಬೇಕಾದ ಅಗತ್ಯವಿಲ್ಲ. ಬೇಕಿದ್ದರೆ ಈ ಬಾರಿ ನಾನು ಮನೆಯಲ್ಲೇ ಕುಳಿತು ಪ್ರಚಾರಕ್ಕೆ ಬೆಂಬಲ ನೀಡುತ್ತೇನೆ’ ಎಂದು ಸಿದ್ದರಾಮಯ್ಯ ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ. 

ಇದೇ ವೇಳೆ ತಮ್ಮನ್ನು ನಿರ್ಲಕ್ಷಿಸಬಾರದು ಎಂಬ ಕಾರಣಕ್ಕೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುವುದನ್ನು ಸಿದ್ದರಾಮಯ್ಯ ಮರೆಯಲಿಲ್ಲ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.