(ಸುಳ್ಳು ಸುದ್ದಿ) ನಾಳೆ ಬಿಜೆಪಿ –ಕಾಂಗ್ರೆಸ್ ಟಿಕೆಟ್ ಹಂಚಿಕೆ : ಬಸ್ , ರೈಲು ಟಿಕೆಟ್ ರದ್ದು

Faking News Election Ticket Anounce Tomarrow
Highlights

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬಹುನಿರೀಕ್ಷಿತ ಟಿಕೆಟ್ ಹಂಚಿಕೆ ನಾಳೆ ನಡೆಯುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಬಸ್ಸು, ರೈಲ್ವೆ, ವಿಮಾನ ಸೇರಿದಂತೆ ಎಲ್ಲಾ ರೀತಿಯ ಟಿಕೆಟ್‌ಗಳನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಲಾಗಿದೆ.

ಬೆಂಗಳೂರು : ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಬಹುನಿರೀಕ್ಷಿತ ಟಿಕೆಟ್ ಹಂಚಿಕೆ ನಾಳೆ ನಡೆಯುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಬಸ್ಸು, ರೈಲ್ವೆ, ವಿಮಾನ ಸೇರಿದಂತೆ ಎಲ್ಲಾ ರೀತಿಯ ಟಿಕೆಟ್‌ಗಳನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಲಾಗಿದೆ.

ಟಿಕೆಟ್ ಆಕಾಂಕ್ಷಿಗಳಿಗೆ ಚುನಾವಣೆ ಟಿಕೆಟ್ ಬದಲು ಬಸ್ ಟಿಕೆಟ್ ನೀಡಿ ಯಾಮಾರಿಸುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ

ಟಿಕೆಟ್ ಹಂಚಿಕೆಯ ಹಿನ್ನೆಲೆಯಲ್ಲಿ ನಾಳೆ ಬಸ್ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗುದಿಲ್ಲ. ಪ್ರಯಾಣಿಕರು ಒಂದು ದಿನ ಮುನ್ನವೇ ಬಸ್ ಟಿಕೆಟ್ ಗಳನ್ನು ಖರೀದಿಸಿರಬೇಕು. ಅಡಚಣೆಗಾಗಿ ವಿಷಾದಿಸುತ್ತೇವೆ ಎಂದು ಸಾರಿಗೆ ಸಂಸ್ಥೆಯ ಉನ್ನತ ಮೂಲಗಳು ಸುಳ್‌ಸುದ್ದಿಗೆ ತಿಳಿಸಿವೆ.

loader