(ಸುಳ್ ಸುದ್ದಿ) ರೌಡಿಸಂ ಬಿಟ್ಟು ಬಿಡಲು ಬೆಂಗಳೂರಿನ ರೌಡಿಗಳು ನಿರ್ಧಾರ

First Published 23, Feb 2018, 11:13 AM IST
Faking News Bengaluru Rowdies Quit Rowdyism
Highlights

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಜಗಳ, ಹೊಡೆದಾಟದಲ್ಲಿ ನಿರತರಾಗಿದ್ದು, ಪುಡಿ ರೌಡಿಗಳಿಗೆ ಕೆಲಸ ಇಲ್ಲದಂತಾಗಿದೆ. ಇಷ್ಟುದಿನ ಹೊಡೆದಾಟ, ರೌಡಿಸಂ ಮಾಡಿಕೊಂಡು ಇದ್ದ ರೌಡಿಗಳು ಚುನಾವಣೆ ಮುಗಿಯುವ ತನಕ ಬೇರೆ ಕೆಲಸವನ್ನು ಹುಡುಕಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

ಬೆಂಗಳೂರು : ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಜಗಳ, ಹೊಡೆದಾಟದಲ್ಲಿ ನಿರತರಾಗಿದ್ದು, ಪುಡಿ ರೌಡಿಗಳಿಗೆ ಕೆಲಸ ಇಲ್ಲದಂತಾಗಿದೆ. ಇಷ್ಟುದಿನ ಹೊಡೆದಾಟ, ರೌಡಿಸಂ ಮಾಡಿಕೊಂಡು ಇದ್ದ ರೌಡಿಗಳು ಚುನಾವಣೆ ಮುಗಿಯುವ ತನಕ ಬೇರೆ ಕೆಲಸವನ್ನು ಹುಡುಕಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

ರಾಜಕೀಯ ಪಕ್ಷಗಳು ಹೊಡೆದಾಟ, ಬೆದರಿಕೆ ಮತ್ತಿತರ ಸಣ್ಣಪುಟ್ಟ ಕಾರ್ಯಕ್ಕೆ ನಮ್ಮ ಬಳಿ ಬರುತ್ತಿದ್ದರು. ಆದರೆ, ಈಗ ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಹೊಡೆದಾಡಿಕೊಳ್ಳುತ್ತಿರುವ ಕಾರಣ ರೌಡಿಸಂಗಾಗಿ ನಮ್ಮ ಬಳಿ ಯಾರೂ ಬರುತ್ತಿಲ್ಲ.

ಪೊಲೀಸರು ಕೂಡ ನಮ್ಮಿಂದ ಹಪ್ತಾ ಕೇಳುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಜೀವ ನೋಪಾಯಕ್ಕಾಗಿ ಬೇರೆ ದಾರಿ ಕಂಡುಕೊಂಡಿದ್ದೇವೆ ಎಂದು ನಗರದ ರೌಡಿಯೊಬ್ಬರು ಸುಳ್ ಸುದ್ದಿಗೆ ಹೇಳಿಕೆ ನೀಡಿದ್ದಾರೆ.

loader