Asianet Suvarna News Asianet Suvarna News

ಮಗಳ ಮದುವೆ ಬಳಿಕ ಜಿಯೋದಿಂದ ಮತ್ತೊಂದು ಭರ್ಜರಿ ಆಫರ್ ಕೊಟ್ಟ ಅಂಬಾನಿ? ಸುಳ್ ಸುದ್ದಿ

ರಿಲಾಯನ್ಸ್ ಜಿಯೋ ಇದೀಗ ಹೊಸ ಆಫರ್ ಒಂದನ್ನು ನೀಡುತ್ತಿದೆ. ಗ್ರಾಹಕರು ಆಲೂಗಡ್ಡೆಗಳನ್ನು ನೀಡಿದಲ್ಲಿ 1 ಜಿಬಿ ಡೇಟಾವನ್ನು ಉಚಿತವಾಗಿ ನೀಡಲಿದೆ. 

Faking News About Reliance jio Offer
Author
Bengaluru, First Published Dec 21, 2018, 11:43 AM IST

ಮುಂಬೈ:  ದೇಶದಲ್ಲಿನ ಕೊಳೆತ ಆಲೂಗಡ್ಡೆಗಳನ್ನು ಸಂಗ್ರಹಿಸಿ ಅದರಿಂದ ಗ್ಯಾಸ್ ಮತ್ತು ಗೊಬ್ಬರ ತಯಾರಿಸಿ ಮಾರಾಟ ಮಾಡಲು ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಆಲೂ ಗೋಬರ್‌ಗ್ಯಾಸ್ ಕಂಪನಿಯೊಂದನ್ನು ಆರಂಭಿಸಲಿದ್ದಾರೆ.

ಈ ಕಂಪನಿಗೆ ಯಥೇಚ್ಛವಾಗಿ ಕೊಳೆತ ಆಲೂಗಡ್ಡೆ ಬೇಕಿದ್ದು ಇದನ್ನು ಜನರಿಂದಲೇ ಸಂಗ್ರಹಿಸಲು ನಿರ್ಧರಿಸಿದ್ದಾರೆ. ಕನಿಷ್ಠ 1 ಕೆಜಿ ಕೊಳೆತ ಆಲೂ ಕೊಟ್ಟವರಿಗೆ ಜಿಯೋ ಕಂಪನಿ ವತಿಯಿಂದ 1 ಜಿ.ಬಿ ಡೇಟಾ ಆಫರ್ ನೀಡಿದ್ದಾರೆ. 

ಮಗಳ ಮದುವೆಗೆ 700 ಕೋಟಿ ರು. ಖರ್ಚು ಮಾಡಿದವರು ಕೊಳೆತ ಆಲೂಗಡ್ಡೆ ಎಂದು ಮುಕೇಶ್ ಅಂಬಾನಿಯವರನ್ನು ಕಾಶ್ಮೀರ ರಾಜ್ಯಪಾಲರು ಟೀಕೆ ಮಾಡಿದ್ದನ್ನು ಕ್ರೀಡಾ ಸ್ಫೂರ್ತಿಯಿಂದ ತೆಗೆದುಕೊಂಡು ಅಂಬಾನಿ ಯವರು ಈ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ.  ಇಷ್ಟೇ ಅಲ್ಲದೆ ತಮ್ಮನ್ನು ಟೀಕಿಸಿ ಹೊಸ ಆಲೋಚನೆ ಮೂಡುವಂತೆ ಮಾಡಿದ ರಾಜ್ಯಪಾಲರನ್ನು ಮುಕೇಶ್ ಅಭಿನಂದಿಸಿದ್ದಾರೆ.

[ಇದು ಸುಳ್ಳು ಸುದ್ದಿಯಾಗಿದ್ದು, ಇದನ್ನು ಕೇವಲ ಮನರಂಜನೆ ದೃಷ್ಟಿಯಿಂದಷ್ಟೇ ನೀಡಲಾಗುತ್ತದೆ]

Follow Us:
Download App:
  • android
  • ios