ಆಧಾರ್ ಸಂಖ್ಯೆಯನ್ನು ಪಾನ್‌ನೊಂದಿಗೆ ಸಂಯೋಜಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ ಬೆನ್ನಲ್ಲೇ, ಇನ್ನೊಂದು ಮಹತ್ವದ ಆದೇಶ ಹೊರಡಿಸಿದೆ. ಅದೇನೆಂದರೆ, ಗಂಡು ಹೆಣ್ಣಿನ ಜಾತಕದ ಜತೆ ಪಾನ್‌ ಮತ್ತು ಆಧಾರ್‌ ಕಾರ್ಡ್‌ ಕೂಡ ಹೊಂದಾಣಿಕೆ ಆಗಬೇಕು.
ಆಧಾರ್ ಸಂಖ್ಯೆಯನ್ನು ಪಾನ್ನೊಂದಿಗೆ ಸಂಯೋಜಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದ ಬೆನ್ನಲ್ಲೇ, ಇನ್ನೊಂದು ಮಹತ್ವದ ಆದೇಶ ಹೊರಡಿಸಿದೆ. ಅದೇನೆಂದರೆ, ಗಂಡು ಹೆಣ್ಣಿನ ಜಾತಕದ ಜತೆ ಪಾನ್ ಮತ್ತು ಆಧಾರ್ ಕಾರ್ಡ್ ಕೂಡ ಹೊಂದಾಣಿಕೆ ಆಗಬೇಕು. ಇಲ್ಲವಾದರೆ ಮದುವೆ ಆಗುವಂತೆ ಇಲ್ಲ. ಇದಕ್ಕೆಂದೇ ಆ್ಯಪ್ವೊಂದನ್ನು ಸಿದ್ಧಪಡಿಸಲಾಗಿದೆ.
ಆಧಾರ್ ಮತ್ತು ಪಾನ್ ನಂಬರ್ ಹೊಂದಿಕೆ ಆಗಿದ್ದಕ್ಕೆ ಪ್ರಮಾಣಪತ್ರ ಲಭ್ಯವಾಗಲಿದೆ. ಅದನ್ನು ತಾಲೂಕು, ಜಿಲ್ಲಾ ಕಚೇರಿಗಳಲ್ಲಿ ತೋರಿಸಿ ಸೀಲ್ ಹಾಕಿಸಿಕೊಳ್ಳಬೇಕು. ಈ ಪ್ರಮಾಣಪತ್ರವನ್ನು ಮದುವೆ ಮಂಟಪದ ಮುಂದೆ ದೊಡ್ಡದಾಗಿ ಪ್ರದರ್ಶಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಂದು ವೇಳೆ ಪಾನ್- ಆಧಾರ್ ಸಂಯೋಜನೆಗೊಳ್ಳದೇ ಇದ್ದರೆ ಮದುವೆ ಬಳಿಕ ರಿಜಿಸ್ಪ್ರೇಷನ್ ಮಾಡಿಸಲು ಸುದೀರ್ಘ ಪ್ರಕ್ರಿಯೆ ಪಾಲಿಸಬೇಕಾಗುತ್ತದೆ ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.
![[ಸುಳ್ ಸುದ್ದಿ] ಗಂಡು ಹೆಣ್ಣಿನ ಜಾತಕದ ಜೊತೆ ಆಧಾರ್ ಪಾನ್ ಹೊಂದಿದರಷ್ಟೇ ಮದುವೆ [ಸುಳ್ ಸುದ್ದಿ] ಗಂಡು ಹೆಣ್ಣಿನ ಜಾತಕದ ಜೊತೆ ಆಧಾರ್ ಪಾನ್ ಹೊಂದಿದರಷ್ಟೇ ಮದುವೆ](https://static.asianetnews.com/images/w-1280,h-720,imgid-ee2ab8be-1b8f-465a-9365-88bd18253d5a,imgname-image.jpg)