Asianet Suvarna News Asianet Suvarna News

(ಸುಳ್ ಸುದ್ದಿ ) ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಬೈ ಟು ಟಿಕೆಟ್

ಕೆಲವು ಕ್ಷೇತ್ರಗಳಲ್ಲಿ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಟಿಕೆಟ್ ಕೇಳಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಪಕ್ಷಗಳು ಈ ಸಮಸ್ಯೆ ಬೈ-ಟೂ ಟಿಕೆಟ್ ನೀಡುವ ಹೊಸ ಪದ್ಧತಿ ಜಾರಿಗೊಳಿಸಲು ನಿರ್ಧರಿಸಿವೆ. ಹೀಗಾಗಿ ಒಂದು ಟಿಕೆಟ್‌ನಿಂದ ಇಬ್ಬರು ಸ್ಪರ್ಧಿಸಬಹುದಾಗಿದೆ. ಆದರೆ, ಇಬ್ಬರೂ ಒಂದೇ ಕ್ಷೇತ್ರದಲ್ಲಿ ನಿಲ್ಲಬೇಕಾಗಿದ್ದರಿಂದ ನಾಮಪತ್ರ ಸಲ್ಲಿಸುವಾಗ ಒಟ್ಟಿಗೇ ಸಲ್ಲಿಬೇಕಾಗುತ್ತದೆ.

Faking Election News

ಬೆಂಗಳೂರು : ಕೆಲವು ಕ್ಷೇತ್ರಗಳಲ್ಲಿ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಟಿಕೆಟ್ ಕೇಳಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಪಕ್ಷಗಳು ಈ ಸಮಸ್ಯೆ ಬೈ-ಟೂ ಟಿಕೆಟ್ ನೀಡುವ ಹೊಸ ಪದ್ಧತಿ ಜಾರಿಗೊಳಿಸಲು ನಿರ್ಧರಿಸಿವೆ. ಹೀಗಾಗಿ ಒಂದು ಟಿಕೆಟ್‌ನಿಂದ ಇಬ್ಬರು ಸ್ಪರ್ಧಿಸಬಹುದಾಗಿದೆ. ಆದರೆ, ಇಬ್ಬರೂ ಒಂದೇ ಕ್ಷೇತ್ರದಲ್ಲಿ ನಿಲ್ಲಬೇಕಾಗಿದ್ದರಿಂದ ನಾಮಪತ್ರ ಸಲ್ಲಿಸುವಾಗ ಒಟ್ಟಿಗೇ ಸಲ್ಲಿಬೇಕಾಗುತ್ತದೆ.

ಚುನಾವಣೆಯಲ್ಲಿ ಗೆದ್ದ ಬಳಿಕ ಶಾಸಕತ್ವದ ಅವಧಿಯನ್ನು ತಲಾ ಎರಡೂವರೆ ವರ್ಷ ಇಬ್ಬರೂ ಹಂಚಿಕೊಳ್ಳಬೇಕಾಗುತ್ತದೆ. ಇದರಿಂದ ಇತರ ಅಭ್ಯರ್ಥಿಗಳಿಗೆ ತೊಂದರೆ ಆಗದೇ ಇರುವ ಕಾರಣ ಬೈ- ಟೂ ಟಿಕೆಟ್ ನೀಡಲು ಚುನಾವಣಾ ಆಯೋಗ ಕೂಡ ಒಪ್ಪಿಗೆ ಸೂಚಿಸಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios