Asianet Suvarna News Asianet Suvarna News

ಸೋಶಿಯಲ್ ಮಿಡಿಯಾದಲ್ಲಿ ಪಂಜಾಬ್ ಸಿಎಂ ವಿಡಿಯೋ ವೈರಲ್ : ಕೇಸ್ ದಾಖಲು

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ವಿಡಿಯೋ ಒಂದು ಸಾಮಾಜಿಕ  ಜಾಲತಾಣದಲ್ಲಿ ವೈರಲ್ ಆಗಿದೆ.  ಈ ಸಂಬಂಧ ಇದೀಗ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

Fake Video Showing Punjab CM Goes Viral
Author
Bengaluru, First Published Sep 30, 2018, 1:34 PM IST
  • Facebook
  • Twitter
  • Whatsapp

ಚಂಡೀಗಢ : ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಅಮರೀಂದರ್ ಸಿಂಗ್ ಅವರ ಬಗ್ಗೆ ನಕಲಿ ವಿಡಿಯೋ ಹಾಕಿದ ಹಿನ್ನೆಲೆಯಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ಐಟಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 

 ದುರುದ್ದೇಶಪೂರ್ವಕವಾಗಿ ಈ ವಿಡಿಯೋವನ್ನು  ಅಪ್ಲೋಡ್ ಮಾಡಲಾಗಿದೆ. ಹರ್ಶ್ ಸೋಫತ್ ಎಂಬ ವ್ಯಕ್ತಿಯು ಸಿಎಂ ವಿರುದ್ಧ ಇಂತಹ ವಿಡಿಯೋವನ್ನು ಅಪಲೋಡ್ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. 

ಅಲ್ಲದೇ ಇದೀಗ ಸೈಬರ್ ಕ್ರೈಂ ಬ್ರಾಂಚ್ ಎಲ್ಲಾ ಸಾಮಾಜಿಕ ಜಾಲತಾಣದಿಂದಲೂ ಕೂಡ ಈ ವಿಡಿಯೊವನ್ನು ಡಿಲೀಟ್ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಈ ಇದೀಗ ಸೂಕ್ತ ತನಿಖೆಯನ್ನೂ ಕೂಡ ಕೈಗೊಂಡಿದೆ. 

Follow Us:
Download App:
  • android
  • ios