ಹೊಂಡಗಳಿಂದ ತುಂಬಿಕೊಂಡಿರುವ ಮುಂಬೈ ರಸ್ತೆಯ ಫೋಟೋವೊಂದನ್ನು ಬೆಂಗಳೂರಿನ ರಸ್ತೆಯೆಂದು ಬಿಂಬಿಸಲು ಯತ್ನಿಸಿದ ಬಿಜೆಪಿ ಐಟಿ ಸೆಲ್’ಗೆ ಸೊಶಿಯಲ್ ಮೀಡಿಯಾದಲ್ಲಿ ಮಂಗಳಾರತಿ ನಡೆದಿರುವ ಘಟನೆ ನಡೆದಿದೆ.
ಬೆಂಗಳೂರು: ಹೊಂಡಗಳಿಂದ ತುಂಬಿಕೊಂಡಿರುವ ಮುಂಬೈ ರಸ್ತೆಯ ಫೋಟೋವೊಂದನ್ನು ಬೆಂಗಳೂರಿನ ರಸ್ತೆಯೆಂದು ಬಿಂಬಿಸಲು ಯತ್ನಿಸಿದ ಬಿಜೆಪಿ ಐಟಿ ಸೆಲ್’ಗೆ ಸೊಶಿಯಲ್ ಮೀಡಿಯಾದಲ್ಲಿ ಮಂಗಳಾರತಿ ನಡೆದಿರುವ ಘಟನೆ ನಡೆದಿದೆ.
ಚಂದ್ರನಲ್ಲಿ ಮನುಷ್ಯರು ನಡೆದಾಡುತ್ತಿದ್ದಾರೆ ಎಂದು ನಾಸಾ ಕಂಡುಹಿಡಿದಿದೆ. ಆದರೆ ಅದು ಬೆಂಗಳೂರು ರಸ್ತೆಯೆಂದು ಬಿಬಿಎಂಪಿ ಖಚಿತಪಡಿಸಿದೆ ಎಂದು ಮುಂಬೈ ರಸ್ತೆಯ ಫೋಟೋ ಹಾಕಿ ವ್ಯಂಗ್ಯಭರಿತವಾಗಿ ಬಿಜೆಪಿ ಐಟಿ ಸೆಲ್ ಟ್ವೀಟಿಸಿದೆ.
ಅದಕ್ಕೆ ಪ್ರತಿಕ್ರಿಯಿಸಿರುವ ಐಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿಯು ಇದನ್ನು ಸಾಬೀತು ಪಡಿಸಬೇಕು ಅಥವಾ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಈ ರಸ್ತೆಯು ಬಿಜೆಪಿ ಸರ್ಕಾರವಿರುವ ಮಹಾರಾಷ್ಟ್ರದ ನವಿಮುಂಬೈಯ ಐರೋಳಿ ಸೆಕ್ಟರ್-6 ರದ್ದು ಎಂದು ಹೇಳಲಾಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಕೂಡಾ ಮಾಡಿದೆ.
ಬಿಜೆಪಿ ಐಟಿ ಸೆಲ್ ಈ ಕ್ರಮವು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೊಳಗಾಗಿದೆ.
