Asianet Suvarna News Asianet Suvarna News

ಸಂಪುಟ ವಿಸ್ತರಣೆ ಸಂದರ್ಭ ಇದೇನು? ಕಾಂಗ್ರೆಸ್ ಶಾಸಕರ ಹೆಸರಲ್ಲಿ ನಕಲಿ ಎಫ್‌ಬಿ ಖಾತೆ

ಸೋಶಿಯಲ್ ಮೀಡಿಯಾದ ನಕಲಿ ಖಾತೆಗಳು ಯಾವ ರೀತಿ ಸಂಕಷ್ಟ ತಂದು ಕೊಡುತ್ತೆವೆ ಎಂಬುದಕ್ಕೆ ಈ  ಉದಾಹರಣೆಯೆ ಸಾಕು.  ನಿಮ್ಮ ಹೆಸರಿನಲ್ಲಿ ಫೇಸ್ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿರುವ ಅಕೌಂಟ್ ಗಳ ಬಗ್ಗೆ ಜಾಗೃತಿ ವಹಿಸದಿದ್ದರೆ ಮುಂದೆ ಕಂಕಟ ಎದುರಾಗುವ ಸಾಧ್ಯತೆಯೂ ರಾಜಕಾರಣಿಗಳಿಗೆ ಇದೆ.

Fake Social Media Facebook accounts in Vijayapura Indi MLA Yashavantharayagouda Patil
Author
Bengaluru, First Published Nov 14, 2018, 5:28 PM IST

ವಿಜಯಪುರ[ನ.14]  ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ನಕಲಿ ಖಾತೆ ನೋಡಿ  ವಿಜಯಪುರ ಜಿಲ್ಲೆಯ ಇಂಡಿ ಶಾಸಕರು ಬೆಚ್ಚಿ ಬಿದ್ದಿದ್ದಾರೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೆಸರಿನಲ್ಲಿವೇ ಹತ್ತಾರು ಫೇಕ್ ಅಕೌಂಟ್ ಗಳು ತೆರೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಶಾಸಕರ ಪಿಎ ರುದ್ರೇಶ ಎಸ್. ಸಿ. ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.  ನಕಲಿ ಅಕೌಂಟ್ ತೆರದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.

ಗುಡ್ ನ್ಯೂಸ್: ವಾಟ್ಸಪ್‌ನಂತೆ ಫೇಸ್ಬುಕ್‌ನಲ್ಲೂ ಬರಲಿದೆ ಈ ಆಪ್ಶನ್!

ಬೆಳಕಿಗೆ ಬಂದಿದ್ದು ಹೇಗೆ? Y. V. Patil ಹೆಸರಿನಿಂದ ಫೇಸ್ಬುಕ್ ಫ್ರೆಂಡ್ ವೊಬ್ಬರ ಜೊತೆ ಮೆಸೆಂಜರ್ನ್ ನಲ್ಲಿ ನಕಲಿ ವ್ಯಕ್ತಿ ಚಾಟ್ ಮಾಡಿದ್ದಾನೆ. ಹೌದು ಪ್ರೀಯ ಸ್ನೇಹಿತ ನನಗ ನಿಜವಾಗಿಯೂ 50 ಸಾವಿರ ಡಾಲರ್ ಅಗತ್ಯವಿದೆ. ನಾನು ನಂತರ ಅದನ್ನು ಡಬಲ್ ಹಣ ಹಿಂದಿರುಗಿಸುತ್ತೇನೆ ಎಂದು ಚಾಟಿಂಗ್ ನಲ್ಲಿ ಹೇಳಿದ್ದಾನೆ. ಈ ರೀತಿ ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕರು ಅವರ ಪಿಎ ಲಿಖಿತ ದೂರು ಸಲ್ಲಿಸಿದ್ದಾರೆ.

Fake Social Media Facebook accounts in Vijayapura Indi MLA Yashavantharayagouda Patil

Follow Us:
Download App:
  • android
  • ios