ಗುಡ್ ನ್ಯೂಸ್: ವಾಟ್ಸಪ್‌ನಂತೆ ಫೇಸ್ಬುಕ್‌ನಲ್ಲೂ ಬರಲಿದೆ ಈ ಆಪ್ಶನ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 12:59 PM IST
Facebook Messenger to Soon Let You Delete a Message Within 10 Minutes of Sending
Highlights

ವಾಟ್ಸಪ್‌ನಂತೆ ಇನ್ಮುಂದೆ ಫೇಸ್ ಬುಕ್ ಮೆಸೆಂಜರ್‌ನಲ್ಲಿ ಗ್ರಾಹಕರು ತಾವು ಕಳುಹಿಸಿದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದಾಗಿದೆ. ಈ ಫೀಚರ್ ಮುಂಬರುವ ವರ್ಶನ್‌ನಲ್ಲಿ ಸಿಗಲಿದೆ ಎಂದು ಇತ್ತೀಚೆಗಷ್ಟೇ ಫೇಸ್ಬುಕ್ ಮಾಹಿತಿ ನೀಡಿದೆ. 

ವಾಟ್ಸಪ್‌ನಂತೆ ಇನ್ಮುಂದೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಗ್ರಾಹಕರು ತಾವು ಕಳುಹಿಸಿದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದಾಗಿದೆ. ಈ ಫೀಚರ್ ಮುಂಬರುವ ವರ್ಶನ್‌ನಲ್ಲಿ ಸಿಗಲಿದೆ ಎಂದು ಇತ್ತೀಚೆಗಷ್ಟೇ ಫೇಸ್ಬುಕ್ ಮಾಹಿತಿ ನೀಡಿದೆ. ಅಷ್ಟಕ್ಕೂ ಮೆಸೇಜ್ ಡಿಲೀಟ್ ಮಾಡಬೇಕಾದ ಅವಧಿ ಏನು? ಯಾವಾಗ ಈ ಫೀಚರ್ ಸಿಗುತ್ತದೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಫೇಸ್ಬುಕ್‌ನ ರಿಲೀಸ್ ನೋಟ್‌ನಲ್ಲಿ ಈ ಕುರಿತಾದ ಮಾಹಿತಿ ನೀಡಲಾಗಿದ್ದು, ಈ ನೂತನ ಅಪ್ಡೇಟ್‌ನಿಂದ iOS ಬಳಕೆದಾರರು ತಾವು ಕಳುಹಿಸಿದ ಯಾವುದೇ ಮೆಸೇಜ್ 10 ನಿಮಿಷದೊಳಗೆ ಡಿಲೀಟ್ ಮಾಡಬಹುದು ಎಂದರೆ ಮೆಸೇಜ್ ಕಳುಹಿಸಿದ ವ್ಯಕ್ತಿ ಕಣ್ತಪ್ಪಿನಿಂದಾಗಿ ಬೇರೆ ಯಾರಿಗೋ ಸಂದೇಶ, ಫೋಟೋ ಅಥವಾ ವಿಡಿಯೋವನ್ನು ಕಳುಹಿಸಿದ್ದರೆ 10 ನಿಮಿಷಗಳೊಳಗಾಗಿ ಹಿಂಪಡೆಯಬಹುದಾಗಿದೆ. 

ಈ ನೂತನ ಫೀಚರ್‌ನ ಐಡಿಯಾ ಇದೇ ವರ್ಷದ ಎಪ್ರಿಲ್‌ನಲ್ಲಿ ಆರಂಭವಾಗಿದ್ದು, ಅಕ್ಟೋಬರ್‌ನಲ್ಲಿ ಇದರ ಟೆಸ್ಟಿಂಗ್ ಆರಂಭವಾಗಿತ್ತು. ಲಭ್ಯವಾದ ಮಾಹಿತಿ ಅನ್ವಯ ಫೇಸ್‌ಬುಕ್ ಮೆಸೆಂಜರ್ ಬಳಕೆದಾರರು ತಮ್ಮ ಹಾಗೂ ತಾವು ಕಳುಹಿಸಿದ ವ್ಯಕ್ತಿ ಇಬ್ಬರ ಇನ್‌ಬಾಕ್ಸ್‌ನಿಂದಲೂ ಮೆಸೇಜ್ ಡಿಲೀಟ್ ಮಾಡಬಹುದು.

ಇನ್ಸ್ಟಂಟ್ ಮೆಸೇಜಿಂಗ್ ಸರ್ವಿಸ್ ವಾಟ್ಸಪ್ ಹಾಗೂ ಫೋಟೋ ಶೇರಿಂಗ್ ಆ್ಯಪ್ ಇನ್ಸ್ಟಾಗ್ರಾಂನಲ್ಲಿ ಕಳುಹಿಸಿದ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ ಈ ಮೊದಲಿನಿಂದಲೂ ಇದೆ. ಆದರೆ ಇತ್ತೀಚೆಗಷ್ಟೇ ವಾಟ್ಸಪ್‌ನ ಈ ಫೀಚರ್‌ನ ರಿಸೀಪಿಯೆಂಟ್ ಲಿಮಿಟ್‌ನಲ್ಲಿ ಬದಲಾವಣೆಯಾಗುವ ವಿಚಾರ ಸದ್ದು ಮಾಡಿತ್ತು. 
 

loader