ರಾಹುಲ್ ಮುಂದಿನ ಪ್ರಧಾನಿಯಾಗಲಿ ಎಂದು ಒಬಾಮ ಹಾರೈಕೆ ?

First Published 5, Jun 2018, 11:40 AM IST
Fake Quote of Obama Endorsing Rahul for PM
Highlights

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಒಟ್ಟಿಗಿರುವ ಫೋಟೋವನ್ನು ಪೋಸ್ಟ್ ಮಾಡಿ, ‘ಭಾರತದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದ್ದು, ಜನರು ಭಾರತದ ಮುಂದಿನ ಪ್ರಧಾನಮಂತ್ರಿಯಾಗಿ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡುತ್ತಾರೆ ಎಂಬುದು ಸ್ಪಷ್ಟ. ನಾನೂ ಕೂಡ ರಾಹುಲ್ ಗಾಂಧಿಯೇ ಪ್ರಧಾನಿಯಾಗಲೆಂದು ಹಾರೈಸುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಒಬಾಮ ಹೇಳಿದ್ದಾರೆ ಎನ್ನಲಾಗಿದೆ. 

ನವದೆಹಲಿ :  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಒಟ್ಟಿಗಿರುವ ಫೋಟೋವನ್ನು ಪೋಸ್ಟ್ ಮಾಡಿ, ‘ಭಾರತದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದ್ದು, ಜನರು ಭಾರತದ ಮುಂದಿನ ಪ್ರಧಾನಮಂತ್ರಿಯಾಗಿ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡುತ್ತಾರೆ ಎಂಬುದು ಸ್ಪಷ್ಟ. 

ನಾನೂ ಕೂಡ ರಾಹುಲ್ ಗಾಂಧಿಯೇ ಪ್ರಧಾನಿಯಾಗಲೆಂದು ಹಾರೈಸುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಒಬಾಮ ಹೇಳಿದ್ದಾರೆ ಎನ್ನಲಾಗಿದೆ. ‘ರಾಹುಲ್ ಗಾಂಧಿ ಮುಂದಿನ ಪಿಎಂ’ ಎಂಬ ಫೇಸ್‌ಬುಕ್ ಫ್ಯಾನ್‌ ಪೇಜ್ ಮೇ.2018ರಲ್ಲಿ ಈ ಫೋಟೋವನ್ನು ಮೊದಲಿಗೆ ಪೋಸ್ಟ್ ಮಾಡಿದ್ದು, ಇದನ್ನು 10 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

ಆದರೆ ನಿಜಕೂ ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿರುವಂತೆ ಬರಾಕ್ ಒಬಾಮ, ರಾಹುಲ್ ಬಗ್ಗೆ ಇಂಥ ಹೊಗಳಿಕೆಯ ಮಾತುಗಳನ್ನಾಡಿದ್ದರೇ ಎಂದು ‘ಆಲ್ಟ್ ನ್ಯೂಸ್’ ತನಿಖೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ಆಲ್ಟ್ ನ್ಯೂಸ್ ಗೂಗಲ್‌ನಲ್ಲಿ ‘ಒಬಾಮಾ ಮತ್ತು ರಾಹುಲ್’ ಎಂದು ಹುಡಕಿದಾಗ 2017 ಡಿಸೆಂಬರ್‌ನಲ್ಲಿ ರಾಹುಲ್ ಗಾಂಧಿ ಮತ್ತು ಒಬಾಮಾ ನಡುವೆ ನಡೆದ ಸಭೆಯ ಕುರಿತಾದ ಲೇಖನವೊಂದು ತೆರದುಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಂದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇರಲಿಲ್ಲ. ಇನ್ನು 2016 ರಲ್ಲಿನ ಮಾಹಿತಿ ಕುರಿತು
ಹುಡುಕ ಹೊರಟಾಗ, ಪ್ರಧಾನಿ ನರೇಂದ್ರ ಮೋದಿ ಬರಾಕ್ ಒಬಾಮಾ ಅವರೊಂದಿಗೆ ಸೆಲ್ಫಿ ತೆಗೆದುಕೊಂಡ ಸಂದರ್ಭದಲ್ಲಿ ರಾಹುಲ್ ನೀಡಿದ್ದ ಹೇಳಿಕೆಯನ್ನು ಗೂಗಲ್ ತೆರೆದಿಡುತ್ತದೆ. 

ಆದರೆ ವಾಸ್ತವವಾಗಿ 2017 ಡಿ.1ರಂದು ಒಬಮಾ ಮತ್ತು ರಾಹುಲ್ ನಡುವೆ ನಡೆದ ಸಭೆ ಬಳಿಕ ಒಬಾಮಾ ಅವರೊಂದಿಗಿದ್ದ ಫೋಟೋವನ್ನು ರಾಹುಲ್ ಗಾಂಧಿ ಟ್ವೀಟಿಸಿದ್ದರು. ಅದೇ ಫೋಟೋವನ್ನು ಬಳಿಸಿಕೊಂಡು ಈ ರೀತಿ ಒಬಾಮ ಹೇಳಿಕೆಯನ್ನು ಸೃಷ್ಟಿಸಲಾಗಿದೆ. ಒಬಾಮ ಅವರು ಎಲ್ಲೂ ಕೂಡ ರಾಹುಲ್ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಲಿ ಎಂಬ ಬಗ್ಗೆ ಮಾತನಾಡಿಲಿಲ್ಲ.

loader