Asianet Suvarna News Asianet Suvarna News

SBI ಎಟಿಎಂನಲ್ಲಿ ಬರ್ತಿದೆಯಂತೆ ನಕಲಿ ನೋಟುಗಳು...!

ನಾಯಂಡಹಳ್ಳಿ ಬಸ್​ ನಿಲ್ದಾಣ ಬಳಿ ಇರುವ ಎಸ್​ಬಿಐ ಶಾಖೆಯ ಎಟಿಎಂನಲ್ಲಿ ಗ್ರಾಹಕ ರಂಜೇಶ್​, ಪವನ ಕುಮಾರ್ ಎಂಬುವವರಿಗೆ ಇಸವಿ ಇಲ್ಲದ 500ರೂ. ಮುಖಬೆಲೆಯ ನಾಲ್ಕು ನೋಟುಗಳು ಡ್ರಾ ಆಗಿವೆ. 

fake notes in SBI ATM

ಬೆಂಗಳೂರು(ನ.02): ಬೆಂಗಳೂರಿನಲ್ಲಿ ಅಸಲಿ ನೋಟಿಗೆ ಪೈಪೋಟಿ ಕೊಡುವಂತಿರುವ ನಕಲಿ ನೋಟುಗಳು ಮೈಸೂರು ರಸ್ತೆಯ ಎಸ್​ಬಿಐ ಬ್ಯಾಂಕ್​​ ಎಟಿಎಂನಲ್ಲಿ ಬಂದಿವೆ. 

ನಾಯಂಡಹಳ್ಳಿ ಬಸ್​ ನಿಲ್ದಾಣ ಬಳಿ ಇರುವ ಎಸ್​ಬಿಐ ಶಾಖೆಯ ಎಟಿಎಂನಲ್ಲಿ ಗ್ರಾಹಕ ರಂಜೇಶ್​, ಪವನ ಕುಮಾರ್ ಎಂಬುವವರಿಗೆ ಇಸವಿ ಇಲ್ಲದ 500ರೂ. ಮುಖಬೆಲೆಯ ನಾಲ್ಕು ನೋಟುಗಳು ಡ್ರಾ ಆಗಿವೆ. 

ಇದನ್ನ ನೋಡಿ ಅನುಮಾನಗೊಂಡ ರಂಜೇಶ್​, ಪವನ ಕುಮಾರ್  ತಕ್ಷಣ ಬ್ಯಾಟರಾಯನಪೂರ ಪೊಲೀಸ್​ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಎಸ್​ಬಿಐ ಕೇಂದ್ರ ಕಚೇರಿಗೆ ತೆರಳುವಂತೆ ಸೂಚಿಸಿದ್ದಾರೆ. 

ನಂತರ ಠಾಣೆಯಿಂದ ಎಟಿಎಂಗೆ ಯುವಕರು ವಾಪಸ್​ ಆಗುವಷ್ಟರಲ್ಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್​ ಎಟಿಎಂ ಬಾಗಿಲು ಮುಚ್ಚಿ ಪರಾರಿ ಆಗಿದ್ದಾನೆ. ಸದ್ಯ ಹಣ ಡ್ರಾ ಮಾಡಿ ಕಂಗಾಲಾಗಿರುವ ಈ ಇಬ್ಬರು ಯುವಕರು, ಎಂಟಿಎಂ​ನಲ್ಲಿ ಬಂದಿರುವ ಖೋಟಾ ನೋಟುಗಳ ಬಗ್ಗೆ ತನಿಖೆ ನಡೆಯಬೇಕು. ತಪ್ಪಿಸ್ಥತರ ವಿರುದ್ಧ ಕ್ರಮ ಕೈಗೊಳ್ಳುವಂತ್ತೆ ಒತ್ತಾಯಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios